ವಿಜಯಸಾಕ್ಷಿ ಸುದ್ದಿ, ಗದಗ: ಕಪ್ಪತ್ತಗಿರಿ ಫೌಂಡೇಶನ್ ವತಿಯಿಂದ ಮಾರ್ಚ್ ತಿಂಗಳಲ್ಲಿ ಆಯೋಜಿಸಿರುವ 5ನೇ ರಾಷ್ಟ್ರೀಯ ಮಹಿಳಾ ಸಮ್ಮೇಳನಕ್ಕೆ ಮುಂಡರಗಿಯ ವೀಣಾ ಹೇಮಂತಗೌಡ ಪಾಟೀಲ ಅವರು ಸರ್ವಾಧ್ಯಕ್ಷರಾಗಿ ಆಯ್ಕೆ ಆಗಿದ್ದು, ಗದಗ ನಗರದಲ್ಲಿ ಮಾರ್ಚ್ 22ರಂದು ನಡೆಯುವ ಮಹಿಳಾ ಸಮ್ಮೇಳನಕ್ಕೆ ಅವರನ್ನು ಅಧಿಕೃತವಾಗಿ ಗೌರವಿಸಿ ಆಹ್ವಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಪ್ಪತ್ತಗಿರಿ ಫೌಂಡೇಶನ್‌ನ ಗದಗ ಜಿಲ್ಲಾ ಅಧ್ಯಕ್ಷರಾದ ಮಮತಾ ದೊಡ್ಡಮನಿ, ಶಿರಹಟ್ಟಿ ತಾಲೂಕು ಅಧ್ಯಕ್ಷರಾದ ಶಾಂತಾ ಅಂಗಡಿ, ಗೌರವ ಅಧ್ಯಕ್ಷರಾದ ಕಾವ್ಯ ಅಂಗಡಿ, ಗದುಗಿನ ಹಿರಿಯ ಸಾಹಿತಿಗಳಾದ ಎ.ಎಸ್. ಮಕಾನದಾರ, ಕಪ್ಪತ್ತಗಿರಿ ಫೌಂಡೇಶನ್ ನಿರ್ದೇಶಕರಾದ ತೋಟಯ್ಯ ಗುಡ್ಡಿಮಠ, ಹೇಮಂತ್‌ಗೌಡ ಪಾಟೀಲ್, ಕಾವೇರಿ ಬೋಲ, ಮಧುಮತಿ ಇಳಕಲ್ ಉಪಸ್ಥಿತರಿದ್ದರು ಎಂದು ಕಪ್ಪತ್ತಗಿರಿ ಫೌಂಡೇಶನ್ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಚಂದ್ರಕಲಾ ಇಟಗಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



