ಬೆಂಗಳೂರು: ಕಾವೇರಿ 5ನೇ ಹಂತದ ಯೋಜನೆಯಡಿ ಹೊಸ EMF ಮೀಟರ್ಗಳನ್ನು ಅಳವಡಿಸುವ ಕಾಮಗಾರಿಯ ಹಿನ್ನೆಲೆಯಲ್ಲಿ ಫೆಬ್ರವರಿ 26, ಗುರುವಾರ ಪೂರ್ವ ಮತ್ತು ದಕ್ಷಿಣ ಬೆಂಗಳೂರಿನ ಹಲವೆಡೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಕಾಮಗಾರಿ ನಡೆಯುವ ವೇಳೆ ಪಂಪಿಂಗ್ ಕಾರ್ಯ ಸ್ಥಗಿತಗೊಳ್ಳುವುದರಿಂದ ಈ ಭಾಗದ ನಿವಾಸಿಗಳು 24 ಗಂಟೆಗಳ ನೀರು ವ್ಯತ್ಯಯಕ್ಕೆ ಸಿದ್ಧರಾಗಬೇಕು ಎಂದು BWSSB ತಿಳಿಸಿದೆ.
ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ದು, ಉಂಟಾಗುವ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಪೂರ್ವ ಬೆಂಗಳೂರು (ಮಹದೇವಪುರ ವಲಯ ಹಾಗೂ ಸುತ್ತಮುತ್ತ):
- ವೈಟ್ಫೀಲ್ಡ್
- ಕಡುಗೋಡಿ
- ಹೂಡಿ
- ಗರುಡಾಚಾರ್ ಪಾಳ್ಯ
- ದೊಡ್ಡನೆಕ್ಕುಂದಿ
- ಮುನ್ನೇಕೊಳಲ (ಮಾರತಹಳ್ಳಿ ಪ್ರದೇಶ)
- ನಲ್ಲೂರುಹಳ್ಳಿ
- ಸಿದ್ದಾಪುರ
- ನಾಗೊಂಡನಹಳ್ಳಿ
- ರಾಮಗೊಂದನಹಳ್ಳಿ
- ಚನ್ನಸಂದ್ರ
ದಕ್ಷಿಣ ಬೆಂಗಳೂರು:
- ಬನಶಂಕರಿ (ವಿವಿಧ ಹಂತಗಳು)
- ಕುಮಾರಸ್ವಾಮಿ ಲೇಔಟ್
- ಪೂರ್ಣಪ್ರಜ್ಞ ಲೇಔಟ್
- ಅಂಜನಾಪುರ
- ಗೊಟ್ಟಿಗೆರೆ
- ಬೇಗೂರು
- ಕಲ್ಲಹಳ್ಳಿ
- ಕುಡ್ಲು
- ಕೊಡಿಚಿಕ್ಕನಹಳ್ಳಿ
ಗುರುವಾರ ಬೆಳಿಗ್ಗೆ 6 ಗಂಟೆಗೆ ಪಂಪಿಂಗ್ ಕಾರ್ಯ ಸ್ಥಗಿತಗೊಳ್ಳಲಿದೆ. ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಮರುಪ್ರಾರಂಭವಾಗಲಿದೆ. ಬಳಿಕ ಮನೆಗಳಿಗೆ ನೀರು ತಲುಪಲು ಹಾಗೂ ಒತ್ತಡ ಸಾಮಾನ್ಯಗೊಳ್ಳಲು ಇನ್ನೂ 3 ರಿಂದ 6 ಗಂಟೆಗಳ ಕಾಲ ಹಿಡಿಯಬಹುದು ಎಂದು ಅಂದಾಜಿಸಲಾಗಿದೆ.
ಹೀಗಾಗಿ ಅಗತ್ಯ ನೀರನ್ನು ಮುಂಚಿತವಾಗಿ ಸಂಗ್ರಹಿಸಿಕೊಳ್ಳುವಂತೆ ಮತ್ತು ಅನಗತ್ಯ ಬಳಕೆಯನ್ನು ತಪ್ಪಿಸುವಂತೆ ಸೂಚಿಸಲಾಗಿದೆ. ಮುಂಬರುವ ಬೇಸಿಗೆ ನೀರಿನ ಅಭಾವವನ್ನು ಸಮರ್ಥವಾಗಿ ಎದುರಿಸಲು BWSSB ಸಮಗ್ರ ಸಿದ್ಧತೆ ಮಾಡಿಕೊಂಡಿದ್ದು, ಪಾರಂಪರಿಕ ವ್ಯವಸ್ಥೆಯಿಂದ ಹೊರಬಂದು ತಂತ್ರಜ್ಞಾನ ಆಧಾರಿತ ಹಾಗೂ ನಾಗರಿಕ ಸ್ನೇಹಿ ಕ್ರಮಗಳನ್ನು ಜಾರಿಗೊಳಿಸಿದೆ ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.



