ವಿಜಯಸಾಕ್ಷಿ ಸುದ್ದಿ, ಧಾರವಾಡ: ಮಹಿಳಾ ವಿ.ವಿ ಸಹಾಯಕ ಪ್ರಾಧ್ಯಾಪಕ ಸಂದೀಪ್ ಅವರು ಸಲ್ಲಿಸಿದ್ದ, `ಕವರೇಜ್ ಆಫ್ ಸೈಬರ್ ಕ್ರೈಮ್: ಅ ಕಂಪಾರೇಟಿವ್ ಸ್ಟಡಿ ಅಮಂಗ್ ಕನ್ನಡ ಆಂಡ್ ಇಂಗ್ಲೀಷ್ ಡೈಲೀಸ್’ ಕುರಿತ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿ ನೀಡಿದೆ.
ಸಂದೀಪ್ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರೊ. ಜೆ.ಎಂ. ಚಂದುನವರ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಉಡುಪಿಯವರಾದ ಸಂದೀಪ್ ಅವರು ವಿಜಯಪುರ ಮಹಿಳಾ ವಿ.ವಿಯ ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.



