ನವದೆಹಲಿ: ದೆಹಲಿ, ಮುಂಬೈ, ಕೋಲ್ಕತಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಕಮರ್ಷಿಯಲ್ ಎಲ್ಪಿಜಿ ದರಗಳು ಹೆಚ್ಚಳ ಆಗಿದೆ.
ತಿಂಗಳ ಮೊದಲ ದಿನವಾದ ಮಾರ್ಚ್ 1ರಂದು ಭಾರತದಲ್ಲಿ 19 ಕಿಲೋ ಕಮರ್ಷಿಯಲ್ ಎಲ್ಪಿಜಿ ದರಗಳು 28ರಿಂದ 31ರೂವರೆಗೆ ಏರಿವೆ. ಬೆಂಗಳೂರಿನಲ್ಲಿ 19 ಕಿಲೋ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆ 1,842.50 ರೂ.ಕ್ಕೆ ಏರಿದ್ದು, 47.5 ಕಿಲೋ ಸಿಲಿಂಡರ್ ಬೆಲೆ 4,600 ರೂ. ದಾಟಿ ಹೋಗಿದೆ.
ಈ ವರ್ಷದ ಮೊದಲ ಆರು ತಿಂಗಳುಗಳು ಉಳಿತಾಯದ ದರಗಳಲ್ಲಿ ಇಳಿಕೆಯೊಂದನ್ನು ಕಂಡಿದ್ದರೆ, ಕಳೆದ ಆರು ತಿಂಗಳಲ್ಲಿ ಕಮರ್ಷಿಯಲ್ ಗ್ಯಾಸ್ ಬೆಲೆ ನಾಲ್ಕು ಬಾರಿ ಏರಿಕೆಯಾಗಿದೆ. ಗೃಹಬಳಕೆ 14.2 ಕಿಲೋ ಹಾಗೂ 5 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
ಮಧ್ಯಪ್ರಾಚ್ಯದಲ್ಲಿ ಆರಂಭವಾದ ಸಂಘರ್ಷ ಮತ್ತು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆ ಪ್ರಭಾವದಿಂದ, ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್, ಎಲ್ಪಿಜಿ ಸೇರಿದಂತೆ ಇಂಧನ ದರಗಳಲ್ಲಿ ಗಣನೀಯವಾಗಿ ಏರಿಕೆ ಆಗುವ ಸಂಭವ ಇದೆ.



