HomeKarnataka Newsಚಾಮರಾಜನಗರ| ಭೀಮನಬೀಡು ಗ್ರಾಮದಲ್ಲಿ ಹುಲಿ ದಾಳಿ, ಹಸು ಬಲಿ!

ಚಾಮರಾಜನಗರ| ಭೀಮನಬೀಡು ಗ್ರಾಮದಲ್ಲಿ ಹುಲಿ ದಾಳಿ, ಹಸು ಬಲಿ!

For Dai;y Updates Join Our whatsapp Group

Spread the love

ಚಾಮರಾಜನಗರ:- ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಹುಲಿ ದಾಳಿಗೆ ಹಸುವೊಂದು ಬಲಿಯಾಗಿದೆ.

ರೈತ ಗೋಪಾಲಶೆಟ್ಟಿಯ ಹಸುವಿನ ಮೇಲೆ ಹುಲಿ ದಾಳಿ ಮಾಡಿದ್ದು, ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಕೂಗಾಡಿದ ಹಿನ್ನೆಲೆ ಹುಲಿ ಓಡಿ ಹೋಗಿದೆ. ದುರಾದೃಷ್ಟವಶಾತ್ ಹಸು ಸಾವನ್ನಪ್ಪಿದೆ.

ಕೂಡಲೇ ಮಾಹಿತಿ ಆಧರಿಸಿ ಸ್ಥಳಕ್ಕೆ ಬಫರ್ ವಲಯದ ಅರಣ್ಯಾಧಿಕಾರಿ ಶಿವಕುಮಾರ್ ಮತ್ತು ಸಿಬ್ಬಂದಿ ಧಾವಿಸಿ ಹುಲಿಯ ಹೆಜ್ಜೆ ಗುರುತು ಪರಿಶೀಲನೆಗೆ ಮುಂದಾಗಿದ್ದಾರೆ.

ಇತ್ತೀಚೆಗೆ ಬೇರಂಬಾಡಿ ಭಾಗದಲ್ಲಿ ಒಂದು ವಾರದಲ್ಲಿ ಎರಡು ಹುಲಿಗಳನ್ನು ಸೆರೆಹಿಡಿದಿದ್ದರಿಂದ ಭೀಮನಬೀಡು ಗ್ರಾಮದಲ್ಲಿಯೂ ಹುಲಿ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಸ್ಥಳದಲ್ಲಿ ಕ್ಯಾಮೆರಾ ಮತ್ತು ಬೋನು ಅಳವಡಿಸುವುದಾಗಿ ಹಾಗೂ ಜಾನುವಾರು ನಷ್ಟಕ್ಕೆ ಪರಿಹಾರ ನೀಡಲಾಗುವುದು ಎಂದು ಅರಣ್ಯ ಇಲಾಖೆ ಭರವಸೆ ನೀಡಿದೆ.

ಇನ್ನೂ ಹುಲಿಯನ್ನು ಶೀಘ್ರದಲ್ಲಿಯೇ ಸೆರೆಹಿಡಿಯಬೇಕೆಂದು ರೈತರು ಕೂಡ ಆಗ್ರಹಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!