ಧಾರವಾಡ: ಮನೆಯಲ್ಲಿ ನೀರು ಕಾಯಿಸುವ ವೇಳೆ ವಿದ್ಯುತ್ ಸ್ಪರ್ಶದಿಂದ ಯುವ ಗೃಹಿಣಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.
ನಿವೇದಿತಾ ನಾಯ್ಕರ್ (24) ಮೃತರು ಎಂದು ಗುರುತಿಸಲಾಗಿದೆ.
ಎರಡು ಮಕ್ಕಳ ತಾಯಿಯಾಗಿದ್ದ ನಿವೇದಿತಾ ನಾಯ್ಕರ್, ಬಕೆಟ್‌ನಲ್ಲಿ ಕ್ವಾಯಿಲ್ ಉಪಯೋಗಿಸಿ ನೀರು ಕಾಯಿಸಲು ಇಟ್ಟಿದ್ದರು. ಈ ವೇಳೆ ಆಕಸ್ಮಿಕವಾಗಿ ಬಕೆಟ್ ಮುಟ್ಟಿದಾಗ ವಿದ್ಯುತ್ ಸ್ಪರ್ಶಗೊಂಡಿದ್ದು, ಗಂಭೀರವಾಗಿ ಗಾಯಗೊಂಡ ಅವರು ಬಾತ್ರೂಮ್‌ನಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆ ಗ್ರಾಮದಲ್ಲಿ ಶೋಕ ವಾತಾವರಣವನ್ನು ಮೂಡಿಸಿದೆ.



