ಪ್ಯಾನ್ ಇಂಡಿಯಾ ಸ್ಟಾರ್ ರಶ್ಮಿಕಾ ಮಂದಣ್ಣ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ! ಸರಳ ಹಿನ್ನೆಲೆಯಿಂದ ಬಂದ ಈ ನಟಿ, ಇಂದು ಭಾರತದೆಲ್ಲೆಡೆ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿಯೂ ತನ್ನದೇ ಆದ ಕ್ರೇಜ್ ನಿರ್ಮಿಸಿಕೊಂಡಿದ್ದಾರೆ.
ಇತ್ತೀಚೆಗೆ ವಿಜಯ್ ದೇವರಕೊಂಡ ಅವರೊಂದಿಗೆ ಮದುವೆಯಾದ ರಶ್ಮಿಕಾ, ವೈಯಕ್ತಿಕ ಜೀವನದ ಖುಷಿಯ ಜೊತೆಗೆ ವೃತ್ತಿ ಜೀವನದಲ್ಲೂ ಫುಲ್ ಫಾರ್ಮ್ನಲ್ಲಿ ಇದ್ದಾರೆ. ಅಭಿಮಾನಿಗಳಿಂದ ‘ನ್ಯಾಷನಲ್ ಕ್ರಶ್’ ಎಂದು ಕರೆಯಲ್ಪಡುವ ಈ ನಟಿ, ಈಗ ಮತ್ತೊಂದು ದೊಡ್ಡ ಸಾಧನೆ ಮೂಲಕ ಗಮನ ಸೆಳೆದಿದ್ದಾರೆ.
ಜಪಾನ್ನ ಟೋಕಿಯೋದಲ್ಲಿ ನಡೆಯಲಿರುವ ಕ್ರಂಚೈರೋಲ್ ಅನಿಮೆ ಅವಾರ್ಡ್ಸ್ ಸಮಾರಂಭದಲ್ಲಿ ರಶ್ಮಿಕಾ ಎರಡನೇ ಬಾರಿ ಭಾಗವಹಿಸಲಿದ್ದಾರೆ. ಈ ಮೂಲಕ, ಎರಡು ಬಾರಿ ಈ ವೇದಿಕೆಯಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಸೆಲೆಬ್ರಿಟಿ ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.
2024ರಲ್ಲಿ ಇದೇ ವೇದಿಕೆಯಲ್ಲಿ ಮಿಂಚಿದ್ದ ರಶ್ಮಿಕಾ, ಈ ಬಾರಿ ಹಾಲಿವುಡ್ ಸೆಲೆಬ್ರಿಟಿಗಳ ಜೊತೆಗೆ ಸ್ಟೇಜ್ ಹಂಚಿಕೊಂಡು ಪ್ರಶಸ್ತಿಗಳನ್ನು ಪ್ರದಾನಿಸಲಿದ್ದಾರೆ. ಇದು ಭಾರತೀಯ ಸಿನಿರಂಗಕ್ಕೆ ದೊಡ್ಡ ಗೌರವವೆಂದೇ ಹೇಳಬಹುದು.
‘ಪುಷ್ಪ’ ಚಿತ್ರದ ಶ್ರೀವಳ್ಳಿ ಪಾತ್ರದಿಂದ ಜಪಾನ್ನಲ್ಲಿ ಭಾರೀ ಕ್ರೇಜ್ ಪಡೆದ ರಶ್ಮಿಕಾ, ಅನಿಮೇ ಪ್ರಪಂಚದ ಮೇಲಿನ ತಮ್ಮ ಪ್ರೀತಿಯಿಂದಲೇ ಈ ವೇದಿಕೆಯಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳುತ್ತಿದ್ದಾರೆ.
‘ಅನಿಮಲ್’ದಿಂದ ‘ಪುಷ್ಪ 2’ವರೆಗೆ ಹಿಟ್ ಮೇಲೆ ಹಿಟ್ ನೀಡುತ್ತಿರುವ ರಶ್ಮಿಕಾ, ಈಗ ‘ಮೈಸಾ’, ‘ರಣಬಲಿ’ ಸೇರಿದಂತೆ ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಗ್ಲೋಬಲ್ ಸ್ಟಾರ್ ಆಗಿ ಮತ್ತಷ್ಟು ಎತ್ತರಕ್ಕೆ ಏರುತ್ತಿರುವ ರಶ್ಮಿಕಾ, ಅಭಿಮಾನಿಗಳ ಗಮನ ಸೆಳೆಯುತ್ತಲೇ ಇದ್ದಾರೆ.



