ಬೆಂಗಳೂರು:- ಭೀಕರ ಅಪಘಾತದಲ್ಲಿ 45ರ ವ್ಯಕ್ತಿ ಪತ್ನಿಯ ಕಣ್ಣೆದುರೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮೈಸೂರು ರಸ್ತೆಯ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಜರುಗಿದೆ.
45 ವರ್ಷದ ಶ್ಯಾಮ್ ದೊರೆ ಮೃತ ವ್ಯಕ್ತಿ. ತಮಿಳುನಾಡಿಗೆ ತೆರಳಿ ಹಿಂದಿರುಗಿದ್ದ ಅವರು ಪತ್ನಿ ಜಯಶ್ರೀ ಎದುರೇ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ. ಕಾರನ್ನು ರಿವರ್ಸ್ ತೆಗೆದುಕೊಳ್ಳುತ್ತಿದ್ದ ಅಪರಿಚಿತ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದ್ದು, ಅಲ್ಲೇ ನಿಂತಿದ್ದ ಬ್ಲಡ್ ಬ್ಯಾಂಕ್ ಬಸ್ ಹಾಗೂ ಕಾರಿನ ನಡುವೆ ಸಿಲುಕಿದ ಶ್ಯಾಮ್ ದೊರೆ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಬ್ಯಾಟರಾಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



