ಬೆಂಗಳೂರು: ಪ್ರತಿ ಐಪಿಎಲ್ ಸೀಸನ್‌ನಲ್ಲಿ ಒಂದು ಪಂದ್ಯವನ್ನು ಹಸಿರು ಜೆರ್ಸಿಯಲ್ಲಿ ಆಡುವ ಪರಂಪರೆಯನ್ನು ಮುಂದುವರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.
ಪ್ರತಿ ಆವೃತ್ತಿಯಲ್ಲೂ ಹಸಿರು ಜೆರ್ಸಿ ಧರಿಸುವ ಮೂಲಕ ಆರ್ಸಿಬಿ ತಂಡ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತದೆ. ವಿಶೇಷವಾಗಿ, ಆಟಗಾರರು ಧರಿಸುವ ಈ ಜೆರ್ಸಿಗಳು ಮರುಬಳಕೆಯಾಗುವ ವಸ್ತುಗಳಿಂದ ತಯಾರಾಗಿರುವುದು ಗಮನಾರ್ಹ. ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ 2011ರಿಂದಲೇ ಆರ್ಸಿಬಿ ತಂಡ ಪ್ರತಿ ಸೀಸನ್‌ನ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ಧರಿಸುವ ಪದ್ಧತಿಯನ್ನು ಅನುಸರಿಸುತ್ತಿದೆ.
ಈ ಕುರಿತು ಆರ್ಸಿಬಿ ತನ್ನ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. “ಇದು ವಿಶೇಷ ದಿನ. ಆಟಗಾರರು ಹಸಿರು ಜೆರ್ಸಿಯಲ್ಲಿ ಕಾಣಿಸಿಕೊಳ್ಳುವ ಜೊತೆಗೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುತ್ತಿರುವ ನಮ್ಮ 100ನೇ ಪಂದ್ಯವೂ ಇದಾಗಿದೆ. ಈ ಸಂಪ್ರದಾಯ ನಮಗೆ ಹೆಮ್ಮೆ ತಂದಿದೆ” ಎಂದು ತಂಡ ತಿಳಿಸಿದೆ.
One of our most special match days of this season is finally here. 🤩💚
Our boys are max excited to step into the Chinnaswamy for the 💯th time in #IPL.
Let's keep our 𝐖 run going boys. 👊🔥✨
Catch all the updates – before, during, and after the match – only on @cricbuzz 📲… pic.twitter.com/ZNl8JXjPQl
— Royal Challengers Bengaluru (@RCBTweets) April 18, 2026
ಈ ಸೀಸನ್‌ನಲ್ಲಿ ಆರ್ಸಿಬಿ ಈಗಾಗಲೇ 5 ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ 4ರಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಕಾಯ್ದಿರಿಸಿಕೊಂಡಿದೆ.



