ಬೆಂಗಳೂರು: ವಿದ್ಯುತ್ ಗ್ರಾಹಕರಿಗೆ ರಾಜ್ಯ ಇಂಧನ ಇಲಾಖೆ ಗುಡ್ ನ್ಯೂಸ್ ನೀಡಿದ್ದು, ಈಗ ವಿದ್ಯುತ್ ಬಿಲ್‌ನಲ್ಲಿ ಹೆಸರು ಬದಲಾವಣೆ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಸುಲಭಗೊಳಿಸಲಾಗಿದೆ.
ಇಂಧನ ಇಲಾಖೆ ಹೊಸ ಲಿಂಕ್ ಬಿಡುಗಡೆ ಮಾಡಿದ್ದು, ಮನೆಯಲ್ಲೇ ಕುಳಿತು ಹೆಸರು ಬದಲಾವಣೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದೆ. ಇಲ್ಲಿಯವರೆಗೆ ಮನೆ ಅಥವಾ ಕಟ್ಟಡ ಖರೀದಿ ಮಾಡಿದ ನಂತರ ವಿದ್ಯುತ್ ಬಿಲ್‌ನ ಹೆಸರು ಬದಲಾಯಿಸಲು ಬೆಸ್ಕಾಂ ಕಚೇರಿಗೆ ಹಲವಾರು ಬಾರಿ ತೆರಳಬೇಕಾಗುತ್ತಿತ್ತು. ಇದೀಗ ಈ ಹೊಸ ಆನ್‌ಲೈನ್ ವ್ಯವಸ್ಥೆಯಿಂದ ಆ ತೊಂದರೆ ನಿವಾರಣೆಯಾಗಿದ್ದು, ಈಗಾಗಲೇ 5,000ಕ್ಕೂ ಹೆಚ್ಚು ಗ್ರಾಹಕರು ಈ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಹೆಸರು ಬದಲಾವಣೆ ಮಾಡುವ ವಿಧಾನ:
ಬೆಸ್ಕಾಂ ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು.
“ಜನಸ್ನೇಹಿ ವಿದ್ಯುತ್ ಸೇವೆಗಳು” ವಿಭಾಗದಲ್ಲಿ “ಒನರ್‌ಶಿಪ್ ನೇಮ್ ಚೆಂಜ್” ಆಯ್ಕೆ ಮಾಡಬೇಕು.
ಅಗತ್ಯ ವಿವರಗಳನ್ನು ಭರ್ತಿ ಮಾಡಿ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
ಅಗತ್ಯ ದಾಖಲೆಗಳು:
ಆಧಾರ್ ಕಾರ್ಡ್
ಮಾರಾಟ ಪತ್ರ (Sale Deed)
ತೆರಿಗೆ ಪಾವತಿ ರಸೀದಿ
ಹಿಂದಿನ ಮಾಲೀಕರಿಂದ ಎನ್‌ಒಸಿ
ಇತ್ತೀಚಿನ ವಿದ್ಯುತ್ ಬಿಲ್
ವಿದ್ಯುತ್ ಪೂರೈಕೆ ಒಪ್ಪಂದ
ನಷ್ಟ ಪರಿಹಾರ ಬಾಂಡ್
ಅರ್ಜಿ ಪತ್ರ
ಫೋಟೋ.
ಈ ಹೊಸ ವ್ಯವಸ್ಥೆಯಿಂದ ಸಮಯ ಹಾಗೂ ಶ್ರಮ ಉಳಿತಾಯವಾಗಲಿದ್ದು, ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



