HomeBengaluru Cityಬೆಂಗಳೂರು-ಮಂಗಳೂರು ಏರ್ ಕ್ವಾಲಿಟಿಯಲ್ಲಿ ಸುಧಾರಣೆ: AQI ಇಳಿದರೂ ಆರೋಗ್ಯದ ಮೇಲೆ ಅಪಾಯ ಇನ್ನೂ ಮುಂದುವರಿಕೆ

ಬೆಂಗಳೂರು-ಮಂಗಳೂರು ಏರ್ ಕ್ವಾಲಿಟಿಯಲ್ಲಿ ಸುಧಾರಣೆ: AQI ಇಳಿದರೂ ಆರೋಗ್ಯದ ಮೇಲೆ ಅಪಾಯ ಇನ್ನೂ ಮುಂದುವರಿಕೆ

For Dai;y Updates Join Our whatsapp Group

Spread the love

ಬೆಂಗಳೂರು: ರಾಜ್ಯದ ಪ್ರಮುಖ ನಗರಗಳ ವಾಯು ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದ್ದು, ವಿಶೇಷವಾಗಿ ಬೆಂಗಳೂರು ಮತ್ತು ಮಂಗಳೂರು ನಗರಗಳ ಏರ್ ಕ್ವಾಲಿಟಿ ಇಂಡೆಕ್ಸ್ (AQI) ಕಳೆದ ಕೆಲವು ವಾರಗಳಿಗೆ ಹೋಲಿಸಿದರೆ ಉತ್ತಮ ಮಟ್ಟಕ್ಕೆ ಇಳಿದಿದೆ. ಆದರೂ ವಿಶ್ವ ಆರೋಗ್ಯ ಸಂಸ್ಥೆ (WHO) ಮಾನದಂಡಗಳ ಪ್ರಕಾರ ಈ ಮಟ್ಟದ ವಾಯು ಗುಣಮಟ್ಟವೂ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಪ್ರಸ್ತುತ ಬೆಂಗಳೂರಿನ AQI 66 ದಾಖಲಾಗಿದ್ದು, ತಾಂತ್ರಿಕವಾಗಿ ‘ಮಧ್ಯಮ’ ಅಥವಾ ‘ಸ್ವೀಕಾರಾರ್ಹ’ ಮಟ್ಟದಲ್ಲಿದೆ. ಮಂಗಳೂರಿನಲ್ಲಿ ಕೆಲ ತಿಂಗಳ ಹಿಂದೆ AQI 200ರ ಗಡಿ ತಲುಪುವ ಮೂಲಕ ಆತಂಕ ಸೃಷ್ಟಿಸಿತ್ತು. ಆದರೆ ಇತ್ತೀಚಿನ ಮಳೆಯ ಪರಿಣಾಮ ಮತ್ತು ಗಾಳಿಯ ಚಲನವಲನದಿಂದ ನಗರದಲ್ಲಿ ವಾಯು ಗುಣಮಟ್ಟ ಸುಧಾರಿಸಿದ್ದು, ಇಂದು AQI 86ಕ್ಕೆ ಇಳಿದಿದೆ.

ರಾಜ್ಯದ ಇತರೆ ನಗರಗಳಲ್ಲೂ ವಾಯು ಗುಣಮಟ್ಟ ಸಾಧಾರಣ ಮಟ್ಟದಲ್ಲಿದ್ದು, ಮೈಸೂರು 74, ಬೆಳಗಾವಿ 68, ಕಲಬುರಗಿ 64, ಶಿವಮೊಗ್ಗ 66, ಬಳ್ಳಾರಿ 86, ಹುಬ್ಬಳ್ಳಿ 87, ಉಡುಪಿ 64 ಹಾಗೂ ವಿಜಯಪುರ 67 AQI ದಾಖಲಿಸಿವೆ.

ತಜ್ಞರ ಪ್ರಕಾರ AQI 0 ರಿಂದ 50ರ ನಡುವೆ ಇದ್ದರೆ ಮಾತ್ರ ಉತ್ತಮ ವಾಯು ಗುಣಮಟ್ಟ ಎಂದು ಪರಿಗಣಿಸಲಾಗುತ್ತದೆ. 50ರಿಂದ 100ರ ಮಟ್ಟ ‘ಮಧ್ಯಮ’ ಎಂದು ವರ್ಗೀಕರಿಸಲ್ಪಟ್ಟರೂ, ಉಸಿರಾಟ ಸಮಸ್ಯೆ ಹೊಂದಿರುವವರು ಮತ್ತು ಮಕ್ಕಳಿಗೆ ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ನಗರಗಳಲ್ಲಿ ವಾಹನಗಳ ದಟ್ಟಣೆ, ಕೈಗಾರಿಕಾ ಮಾಲಿನ್ಯ ಮತ್ತು ಧೂಳು ಪ್ರಮಾಣ ಕಡಿಮೆಯಾಗದ ಹೊರತು ವಾಯು ಗುಣಮಟ್ಟದಲ್ಲಿ ಶಾಶ್ವತ ಸುಧಾರಣೆ ಸಾಧ್ಯವಿಲ್ಲ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!