HomeCrime Newsಬೆಂಗಳೂರುದಲ್ಲಿ ಬೃಹತ್ GST ವಂಚನೆ ಬಯಲು: ₹2,384 ಕೋಟಿ ನಕಲಿ ITC ಜಾಲ ಪತ್ತೆ!

ಬೆಂಗಳೂರುದಲ್ಲಿ ಬೃಹತ್ GST ವಂಚನೆ ಬಯಲು: ₹2,384 ಕೋಟಿ ನಕಲಿ ITC ಜಾಲ ಪತ್ತೆ!

For Dai;y Updates Join Our whatsapp Group

Spread the love

ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ನಕಲಿ ITC (ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್) ವಂಚನೆ ಜಾಲ ಬಯಲಾಗಿದೆ. ಸುಮಾರು ₹2,384 ಕೋಟಿ ಸಂಶಯಾಸ್ಪದ ವಹಿವಾಟು ನಡೆಸಿ ₹420 ಕೋಟಿ ನಕಲಿ ITC ಪಡೆದಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ಸಲೀಮುಲ್ಲಾ ಬೇಗ್ (59) ಮತ್ತು ಹಸೇನ್ ಬೇಗ್ (35) ಎಂದು ಗುರುತಿಸಲಾಗಿದೆ. ತನಿಖೆಯಲ್ಲಿ ಸಲೀಮುಲ್ಲಾ ಬೇಗ್ 72 ನಕಲಿ ಸರಬರಾಜು ಸಂಸ್ಥೆಗಳ ಮೂಲಕ ₹2,172 ಕೋಟಿ ವಹಿವಾಟು ತೋರಿಸಿ ₹382 ಕೋಟಿ ನಕಲಿ ITC ಪಡೆದಿರುವುದು ಪತ್ತೆಯಾಗಿದೆ. ಹಸೇನ್ ಬೇಗ್ 55 ಸಂಸ್ಥೆಗಳ ಮೂಲಕ ₹212 ಕೋಟಿ ವಹಿವಾಟು ತೋರಿಸಿ ₹35 ಕೋಟಿ ವಂಚನೆ ನಡೆಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಟಂಗ್‌ಸ್ಟನ್ ಕಾರ್ಬೈಡ್ ಸ್ಕ್ರ್ಯಾಪ್, ಇ-ವೆಸ್ಟ್ ಹಾಗೂ ಇತರೆ ಸ್ಕ್ರ್ಯಾಪ್ ಹೆಸರಿನಲ್ಲಿ ನಕಲಿ ಬಿಲ್ಲುಗಳನ್ನು ಸೃಷ್ಟಿಸಿ ತೆರಿಗೆ ಕ್ರೆಡಿಟ್ ಪಡೆಯುತ್ತಿದ್ದರು. ಈ ಮೂಲಕ ಸರ್ಕಾರಕ್ಕೆ ಭಾರೀ ನಷ್ಟ ಉಂಟುಮಾಡಿರುವುದು ಬೆಳಕಿಗೆ ಬಂದಿದೆ.

ತನಿಖೆ ವೇಳೆ ಒಟ್ಟು 127 ನಕಲಿ ಸಂಸ್ಥೆಗಳ ಜಾಲ ಪತ್ತೆಯಾಗಿದ್ದು, ಹಲವು ವರ್ಷಗಳಿಂದ ಸಂಘಟಿತವಾಗಿ ವಂಚನೆ ನಡೆಯುತ್ತಿತ್ತು ಎನ್ನಲಾಗಿದೆ. ವಿಶೇಷವಾಗಿ SKS ಟ್ರೇಡರ್ಸ್ ಸಂಸ್ಥೆಯ ವಹಿವಾಟು ಮೂರು ವರ್ಷಗಳಲ್ಲಿ ₹50 ಕೋಟಿಯಿಂದ ₹900 ಕೋಟಿಗೆ ಏರಿಕೆಯಾಗಿದ್ದರೂ, ಅದಕ್ಕೆ ಸಂಬಂಧಿಸಿದ ದಾಖಲೆಗಳು ಇಲ್ಲದಿರುವುದು ಅಧಿಕಾರಿಗಳಿಗೆ ಅನುಮಾನ ಹುಟ್ಟಿಸಿತ್ತು.

GST ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಕಳೆದ ಜನವರಿಯಲ್ಲೂ ₹1,464 ಕೋಟಿ ವಹಿವಾಟು ಸಂಬಂಧ ಐವರನ್ನು ಬಂಧಿಸಲಾಗಿತ್ತು. ಈ ಮೂಲಕ ಈ ವರ್ಷ GST ವಂಚನೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!