HomeBengaluru Newsಗ್ರಾಹಕರಿಗೆ ಬಿಗ್ ಶಾಕ್! ಊಟ-ತಿಂಡಿ, ಕಾಫಿ-ಟೀ ದರ ಹೆಚ್ಚಳ!? ಬೆಲೆ ಏರಿಕೆಗೆ ಮಾಲೀಕರು ಸಜ್ಜು!

ಗ್ರಾಹಕರಿಗೆ ಬಿಗ್ ಶಾಕ್! ಊಟ-ತಿಂಡಿ, ಕಾಫಿ-ಟೀ ದರ ಹೆಚ್ಚಳ!? ಬೆಲೆ ಏರಿಕೆಗೆ ಮಾಲೀಕರು ಸಜ್ಜು!

For Dai;y Updates Join Our whatsapp Group

Spread the love

ಬೆಂಗಳೂರು: ಮಧ್ಯಪ್ರಾಚ್ಯ ಸಂಘರ್ಷ ಹಾಗೂ ಜಾಗತಿಕ ಇಂಧನ ಮಾರುಕಟ್ಟೆಯ ಅಸ್ಥಿರತೆಯ ಪರಿಣಾಮವಾಗಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದೀಗ ನೇರ ಪರಿಣಾಮ ಹೋಟೆಲ್ ಉದ್ಯಮದ ಮೇಲೆ ಕಾಣಿಸಿಕೊಳ್ಳುತ್ತಿದೆ.

ಬೆಂಗಳೂರು ನಗರದ ಬಹುತೇಕ ಹೋಟೆಲ್‌ಗಳ ಮಾಲೀಕರು ಊಟ, ತಿಂಡಿ, ಟೀ ಹಾಗೂ ಕಾಫಿ ದರಗಳನ್ನು ಹೆಚ್ಚಿಸಲು ಮುಂದಾಗಿದ್ದಾರೆ. ಈಗಾಗಲೇ ಕೆಲವು ಹೋಟೆಲ್‌ಗಳು ಹೊಸ ದರಪಟ್ಟಿಯನ್ನು ಜಾರಿಗೆ ತಂದಿದ್ದು, ಉಳಿದ ಹೋಟೆಲ್‌ಗಳು ಮುಂದಿನ ಕೆಲ ದಿನಗಳಲ್ಲಿ ದರ ಏರಿಕೆ ಮಾಡಲು ಸಿದ್ಧತೆ ನಡೆಸಿವೆ.

ಮಾಹಿತಿಯಂತೆ, ಕಳೆದ ಮೂರು ತಿಂಗಳಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಸುಮಾರು ₹1,240ರಷ್ಟು ಏರಿಕೆ ದಾಖಲಾಗಿದೆ. ಇತ್ತೀಚಿನ ತಿಂಗಳಲ್ಲಿ ಮಾತ್ರ ₹991 ಹಾಗೂ ನಂತರ ₹46ರಷ್ಟು ಹೆಚ್ಚಳ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯ ಸಾಧ್ಯತೆ ಇರುವುದರಿಂದ ಸಿಲಿಂಡರ್ ಬೆಲೆ ₹4,000 ಗಡಿ ತಲುಪುವ ಭೀತಿ ಹೋಟೆಲ್ ಉದ್ಯಮವನ್ನು ಕಾಡುತ್ತಿದೆ.

ದರ ಏರಿಕೆಯಿಂದಾಗಿ ಇಡ್ಲಿ–ವಡೆ, ದೋಸೆ ಸೇರಿದಂತೆ ವಿವಿಧ ತಿಂಡಿ ಪದಾರ್ಥಗಳ ಮೇಲೆ ₹5 ರಿಂದ ₹10ರವರೆಗೆ ಹಾಗೂ ಊಟದ ಮೇಲೆ ₹10 ರಿಂದ ₹20ರವರೆಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಕಚೇರಿ ನೌಕರರು, ಮಧ್ಯಮ ವರ್ಗ ಹಾಗೂ ಬ್ಯಾಚುಲರ್ ಗ್ರಾಹಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗಿದೆ.

ಹೋಟೆಲ್ ಮಾಲೀಕರ ಪ್ರಕಾರ, ಇಂಧನ ಮತ್ತು ಕಾರ್ಯಾಚರಣೆ ವೆಚ್ಚಗಳ ಹೆಚ್ಚಳದಿಂದ ಅನಿವಾರ್ಯವಾಗಿ ದರ ಪರಿಷ್ಕರಣೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!