ರಾಯಚೂರು: ಧಾರಾಕಾರ ಮಳೆಗೆ ಮಂತ್ರಾಲಯ ಅಕ್ಷರಶಃ ನಲುಗಿ ಹೋಗಿದೆ.
ಧಾರಾಕಾರ ಮಳೆಯಿಂದ ಪ್ರಸಿದ್ಧ ಶ್ರೀ ರಾಘವೇಂದ್ರ ಸ್ವಾಮಿ ಮಠ ಸುತ್ತಮುತ್ತಲ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಭಕ್ತರ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.
ಮಳೆಯ ಅರ್ಭಟದಿಂದ ರಸ್ತೆಗಳಲ್ಲಿ ನೀರು ಹರಿದು ಹೊಳೆಯಂತಾದ ದೃಶ್ಯ ನಿರ್ಮಾಣವಾಗಿದ್ದು, ಅನೇಕ ಭಕ್ತರು ನೀರಿನ ನಡುವೆಯೇ ರಾಯರ ದರ್ಶನಕ್ಕೆ ತೆರಳುವ ಪರಿಸ್ಥಿತಿ ಎದುರಾಗಿದೆ.
ಸ್ಥಳೀಯ ಆಡಳಿತ ಹಾಗೂ ಮಠದ ಆಡಳಿತ ಮಂಡಳಿ ತಕ್ಷಣ ಕ್ರಮ ಕೈಗೊಂಡು ಭಕ್ತರಿಗೆ ಅಗತ್ಯ ಸಹಾಯ ಹಾಗೂ ಸುರಕ್ಷತಾ ವ್ಯವಸ್ಥೆ ಕಲ್ಪಿಸಿದ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಅನಾಹುತ ತಪ್ಪಿದೆಯೆಂದು ತಿಳಿದುಬಂದಿದೆ.



