ವಿಜಯಸಾಕ್ಷಿ ಸುದ್ದಿ, ಗದಗ:
ರಾಯಚೂರಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದನ್ನು ಖಂಡಿಸಿ ಬುಧವಾರ ಗದಗ-ಬೆಟಗೇರಿ ನಗರಸಭೆ ಆವರಣದಲ್ಲಿರುವ ಅಂಬೇಡ್ಕರ್‌ರವರ ಪುತ್ಥಳಿಗೆ ಸಾಮಾಜಿಕ ಕಾರ್ಯಕರ್ತ ಸೈಯದ್ ಖಾಲಿದ್ ಕೊಪ್ಪಳ ಹಾಲಿನ ಅಭಿಷೇಕ ಮಾಡಿದರು.
ಈ ವೇಳೆ ಮಾತನಾಡಿದ ಅವರು, ‘ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ನ್ಯಾಯಾಧೀಶರನ್ನು ಶೀಘ್ರವೇ ಅಮಾನತು ಮಾಡಬೇಕು. ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಸಂವಿಧಾನ ಬದಲಾವಣೆ ಸೂರ್ಯ ಚಂದ್ರರಿರುವರೆಗೂ ಬದಲಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದ ಅವರು, ರಾಜ್ಯದಲ್ಲಿನ ಶಾಂತಿ ಕದಡಿಸುತ್ತಿರುವ ಕೋಮುವಾದಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುಲ್ಲೇಶ್ ಭಜಂತ್ರಿ, ಶಫೀ ನಗರಕಟ್ಡಿ,
ಎಂ.ಪಿ.ಮುಳುಗುಂದ, ಅಕ್ಬರ್ ಅಲಿ ಬೇಗ್, ಗಣೇಶ ಹುಬ್ಬಳ್ಳಿ, ಇರ್ಫಾನ್ ಡಂಬಳ, ಲಾಡಸಾಬ್ ಕಿತ್ತೂರ, ಫ್ರಾನ್ಸಿಸ್ ಕಣಯ್ಯ, ಮುಬಾರಕ್ ನರೇಗಲ್, ಮೆಹಬೂಬ್ ಕುರಹಟ್ಟಿ, ಖ್ವಾಜಾ ಸೈಯದ್, ಚಾಂದ್ ಕೊಟ್ಟೂರು, ಚಿದಾನಂದ, ಮಹಮ್ಮದ್, ದಾವಲಸಾಬ್, ತೌಸೀಫ್, ಜಿಶಾನ್ ಖಾಜಿ, ಆಂಜನೇಯ, ವೀರೇಶ್ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.