ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿ ಸಮೃದ್ಧ ಬೆಳೆ ಬರಲಿ ಎಂದು ಪ್ರಾರ್ಥಿಸಿ ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ರೈತರು ಹಾಗೂ ಗ್ರಾಮಸ್ಥರು ಒಗ್ಗೂಡಿ ಊರಿನ ಕರಗಲ್ಲುಗಳಿಗೆ ಜಲಾಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿದರು.
ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಯಾವುದೇ ಅಡೆತಡೆ ಇಲ್ಲದೆ ಸಾಗಲಿ, ಅನ್ನದಾತರ ಬದುಕು ಹಸನಾಗಲಿ ಎಂಬ ಸಂಕಲ್ಪದೊಂದಿಗೆ ಗ್ರಾಮಸ್ಥರು ಭಕ್ತಿಭಾವದಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಗ್ರಾಮದ ಜಂಗಮ ವಂಶಸ್ಥರಾದ ಮಲ್ಲಯ್ಯ, ಪಂಚಯ್ಯ ಹಾಗೂ ಡಿ.ಎಂ. ಪ್ರವೀಣ ಸ್ವಾಮಿ ಅವರು ಶಾಸ್ತ್ರೋಕ್ತವಾಗಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
“ಪ್ರತಿವರ್ಷದಂತೆ ಈ ವರ್ಷವೂ ಸಕಾಲಕ್ಕೆ ಉತ್ತಮ ಮಳೆಯಾಗಿ ಭೂಮಿ ತಾಯಿ ಹಸಿರಿನಿಂದ ಕಂಗೊಳಿಸಲಿ. ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿ ಎಂಬುದು ಈ ವಿಶೇಷ ಪೂಜೆಯ ಸಂಕಲ್ಪ” ಎಂದು ಗ್ರಾಮದ ಹಿರಿಯ ಮಹಾಬಲೇಶ್ವರ ಸ್ವಾಮಿ ತಿಳಿಸಿದರು.
ಈ ಸಂದರ್ಭದಲ್ಲಿ ಟಿ. ಪಕ್ಕೀರಪ್ಪ, ಮ್ಯಾಗಳಮನಿ ಬಸವರಾಜಪ್ಪ, ಕಾತರಕಿ ಕೊಟ್ರೇಶ್, ಕೆಂಚಪ್ಪ, ಅಂಬರೀಶ, ಸಂತೋಷ, ದೊಡ್ಡಬಸಪ್ಪ, ಗಡೆದು ಕೊಟ್ರೇಶ್, ಆನೇಕಲ್ ವಿರೂಪಾಕ್ಷಪ್ಪ, ಚಣ್ಣದ ಮಲ್ಲಿಕಾರ್ಜುನ, ಸುಣಗಾರ ಮಾರುತಿ, ನಿಂಗರಾಜ, ಲೋಕೇಶ್, ಮಹೇಶ್ ಕಿನ್ನಾಳ, ರವಿ, ಅಸೂಳಿ ಮಾರುತಿ, ಹೊಳೆಯಪ್ಪ, ನವೀನ, ಪಟ್ಟಣಶೆಟ್ಟಿ ವೀರಬಸಪ್ಪ, ಬಸಯ್ಯ, ಮುದುಕಪ್ಪ, ಶಿವು, ಚನ್ನಪ್ಪ ಸೇರಿದಂತೆ ನೂರಾರು ರೈತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಪೂಜೆ ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.



