ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮನಗರದ ದರ್ಶನ್ ಹೋಟೆಲ್ ಮಾಲೀಕ ಎಸ್.ಎಂ. ಗಂಗಾಧರಯ್ಯ ಹಾಗೂ ಅವರ ಆಪ್ತ ಸ್ನೇಹಿತರ ಬಳಗದಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಪ್ರತಿನಿತ್ಯ ನೀಡಲಾಗುತ್ತಿರುವ ಉಚಿತ ಉಪಹಾರ ಸೇವೆ 450ನೇ ದಿನವನ್ನು ಯಶಸ್ವಿಯಾಗಿ ಪೂರೈಸಿತು.
ಈ ಸಂದರ್ಭದಲ್ಲಿ ಆಸ್ಪತ್ರೆಯ 121 ಒಳರೋಗಿಗಳಿಗೆ ಉಚಿತ ಉಪಹಾರ ವಿತರಿಸಲಾಯಿತು. ಸೇವೆ ಆರಂಭವಾದ ನಂತರ ಒಂದೇ ದಿನದಲ್ಲಿ ಅತಿ ಹೆಚ್ಚು ರೋಗಿಗಳಿಗೆ ಉಪಹಾರ ವಿತರಿಸಿದ ದಿನ ಎಂಬ ವಿಶೇಷಕ್ಕೂ ಇದು ಸಾಕ್ಷಿಯಾಯಿತು.
2025ರ ಮಾರ್ಚ್ 31ರಂದು ಆರಂಭಗೊಂಡ ಈ ಸಮಾಜಮುಖಿ ಕಾರ್ಯವು ಸ್ನೇಹಿತರ ಸಹಕಾರದಿಂದ ನಿರಂತರವಾಗಿ ಸಾಗುತ್ತಿದ್ದು, ರೋಗಿಗಳು ಹಾಗೂ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ದರ್ಶನ್ ಹೋಟೆಲ್ ಸಿಬ್ಬಂದಿಯೂ ಈ ಸೇವೆಯಲ್ಲಿ ಕೈಜೋಡಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಸಿಎಂ ಶ್ರೀನಿವಾಸ್, ಸರ್ದಾರ್ ಯಮನೂರಪ್ಪ, ಪಾನ್‌ಶಾಪ್ ಪುಟ್ಟಣ್ಣ, ಆಟೋ ವೀರೇಶ್, ಮಡಿವಾಳರ ಅಶೋಕ್, ಸೆರಗಾರ್ ಪರಶುರಾಮ್ ಹಾಗೂ ಹೋಟೆಲ್ ಸಿಬ್ಬಂದಿ ಉಪಸ್ಥಿತರಿದ್ದರು.



