HomeIndia Newsಹಿಂದೂ ವಿವಾಹಕ್ಕೆ ನೋಂದಣಿ ಮಾತ್ರ ಸಾಕಾಗುವುದಿಲ್ಲ: ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು

ಹಿಂದೂ ವಿವಾಹಕ್ಕೆ ನೋಂದಣಿ ಮಾತ್ರ ಸಾಕಾಗುವುದಿಲ್ಲ: ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು

For Dai;y Updates Join Our whatsapp Group

ಅಹಮದಾಬಾದ್: ಕೇವಲ ವಿವಾಹ ನೋಂದಣಿ ಮಾಡಿಕೊಂಡರೆ ಹಿಂದೂ ವಿವಾಹ ಕಾನೂನುಬದ್ಧವಾಗುವುದಿಲ್ಲ. ಹಿಂದೂ ಸಂಪ್ರದಾಯದ ಪ್ರಕಾರ ಸಪ್ತಪದಿ ಸೇರಿದಂತೆ ಅಗತ್ಯ ವಿಧಿ-ವಿಧಾನಗಳು ನಡೆದಾಗ ಮಾತ್ರ ವಿವಾಹಕ್ಕೆ ಕಾನೂನು ಮಾನ್ಯತೆ ಸಿಗುತ್ತದೆ ಎಂದು ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಜೂನ್ 23ರಂದು ನ್ಯಾಯಮೂರ್ತಿಗಳಾದ ಇಲೇಶ್ ವೋರಾ ಮತ್ತು ಆರ್.ಟಿ. ವಚ್ಛಾನಿ ಅವರ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಹಿಂದೂ ವಿವಾಹವು ಕೇವಲ ಔಪಚಾರಿಕ ಕಾರ್ಯಕ್ರಮವಲ್ಲ, ಅದು ಧಾರ್ಮಿಕ ಸಂಸ್ಕಾರ ಮತ್ತು ಪವಿತ್ರ ಬಂಧವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ಪ್ರಕರಣದಲ್ಲಿ ಬ್ರಿಟನ್‌ನಲ್ಲಿ ನೆಲೆಸಿರುವ ಕೌಶಲ್ ಸೋನಾರ್ ಎಂಬುವರು, ಅಹಮದಾಬಾದ್‌ನ ಮಹಿಳೆಯೊಂದಿಗೆ ತಮ್ಮ ಹೆಸರಿನಲ್ಲಿ ನಡೆದಿರುವ ವಿವಾಹವನ್ನು ಅಮಾನ್ಯ ಎಂದು ಘೋಷಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು.

ತಮ್ಮ ಪೋಷಕರಿಗೆ ವಿವಾಹ ಪ್ರಮಾಣಪತ್ರ ತೋರಿಸಿದ ಬಳಿಕವೇ ಈ ವಿಚಾರ ತಿಳಿಯಿತು. ತಮ್ಮ ಒಪ್ಪಿಗೆಯಿಲ್ಲದೆ ದಾಖಲೆಗಳಲ್ಲಿ ಸಹಿ ಪಡೆಯಲಾಗಿದೆ. ಯಾವುದೇ ಹಿಂದೂ ಸಂಪ್ರದಾಯದ ವಿವಾಹ ವಿಧಿ-ವಿಧಾನಗಳು ನಡೆದಿಲ್ಲ ಹಾಗೂ ಇಬ್ಬರೂ ಪತಿ-ಪತ್ನಿಯಾಗಿ ಎಂದಿಗೂ ಒಟ್ಟಿಗೆ ವಾಸಿಸಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪ್ರಕರಣದ ವಿಚಾರಣೆ ವೇಳೆ ಮಹಿಳೆಯೂ ಸಹ ಕುಟುಂಬ ನ್ಯಾಯಾಲಯದ ಮುಂದೆ ಯಾವುದೇ ವಿವಾಹ ವಿಧಿ-ವಿಧಾನಗಳು ನಡೆದಿಲ್ಲ ಹಾಗೂ ಇಬ್ಬರೂ ಪತಿ-ಪತ್ನಿಯಾಗಿ ಬದುಕಿಲ್ಲ ಎಂದು ಒಪ್ಪಿಕೊಂಡಿದ್ದರು. ಆದರೂ ಅರ್ಜಿಯನ್ನು ತಿರಸ್ಕರಿಸಿದ್ದ ಕುಟುಂಬ ನ್ಯಾಯಾಲಯದ ಆದೇಶ ಸರಿಯಲ್ಲ ಎಂದು ಹೈಕೋರ್ಟ್ ಹೇಳಿದೆ.

ಹಿಂದೂ ವಿವಾಹ ಕಾಯ್ದೆ-1955ರ ಸೆಕ್ಷನ್ 7 ಅನ್ನು ಉಲ್ಲೇಖಿಸಿದ ನ್ಯಾಯಾಲಯ, ಹಿಂದೂ ವಿವಾಹವು ಸಂಪ್ರದಾಯದ ಪ್ರಕಾರ ನಡೆಯಬೇಕು. ವಿಶೇಷವಾಗಿ ಸಪ್ತಪದಿ ಹಿಂದೂ ವಿವಾಹದ ಅತ್ಯಂತ ಪ್ರಮುಖ ವಿಧಿಯಾಗಿದ್ದು, ಅದು ನೆರವೇರಿದಾಗ ಮಾತ್ರ ವಿವಾಹಕ್ಕೆ ಧಾರ್ಮಿಕ, ಸಾಮಾಜಿಕ ಮತ್ತು ಕಾನೂನುಬದ್ಧ ಮಾನ್ಯತೆ ದೊರೆಯುತ್ತದೆ ಎಂದು ಸ್ಪಷ್ಟಪಡಿಸಿದೆ.

ಹಿಂದೂ ವಿವಾಹವು ಕೇವಲ ಆಚರಣೆ ಅಥವಾ ಔತಣಕೂಟವಲ್ಲ. ಅದು ಪರಸ್ಪರ ಗೌರವ, ನಂಬಿಕೆ ಮತ್ತು ಜೀವನಪರ್ಯಂತದ ಬಾಂಧವ್ಯದ ಮೇಲೆ ನಿರ್ಮಾಣವಾಗುವ ಪವಿತ್ರ ಸಂಬಂಧವಾಗಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img