HomeEntertainment8 ವರ್ಷದ ಬಾಲಕಿಯ ಫೋಟೋ ಹಂಚಿಕೆ ಆರೋಪ: ನಟ ವಿನಾಯಗನ್ ವಿರುದ್ಧ ಮತ್ತೊಂದು ಪ್ರಕರಣ

8 ವರ್ಷದ ಬಾಲಕಿಯ ಫೋಟೋ ಹಂಚಿಕೆ ಆರೋಪ: ನಟ ವಿನಾಯಗನ್ ವಿರುದ್ಧ ಮತ್ತೊಂದು ಪ್ರಕರಣ

For Dai;y Updates Join Our whatsapp Group

ಫೇಸ್‌ಬುಕ್‌ನಲ್ಲಿ ಎಂಟು ವರ್ಷದ ಬಾಲಕಿಯ ಫೋಟೋ ಹಂಚಿಕೊಂಡ ಆರೋಪದಡಿ ಮಲಯಾಳಂ ನಟ ವಿನಾಯಗನ್ ವಿರುದ್ಧ ಕೇರಳ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. ಮಕ್ಕಳ ಹಕ್ಕುಗಳ ಆಯೋಗದ ಸೂಚನೆಯ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿನಾಯಗನ್ ಅವರಿಗೆ ಕಳುಹಿಸಲಾಗಿದ್ದ ವಾಟ್ಸ್ಆ್ಯಪ್ ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ದೂರುದಾರರ ವಾಟ್ಸ್ಆ್ಯಪ್ ಪ್ರೊಫೈಲ್ ಫೋಟೋ ಹಾಗೂ ಮೊಬೈಲ್ ಸಂಖ್ಯೆ ಕೂಡ ಕಾಣಿಸಿಕೊಂಡಿದ್ದು, ಪ್ರೊಫೈಲ್ ಚಿತ್ರದಲ್ಲಿ ಎಂಟು ವರ್ಷದ ಬಾಲಕಿಯ ಫೋಟೋ ಇತ್ತು ಎಂದು ಆರೋಪಿಸಲಾಗಿದೆ.

ಪೋಸ್ಟ್ ವೈರಲ್ ಆದ ನಂತರ ಹಲವರು ದೂರುದಾರರ ಕುಟುಂಬದ ವಿರುದ್ಧ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದು, ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನಿಂದಿಸಿದ್ದಾರೆ ಎನ್ನಲಾಗಿದೆ. ಇದರಿಂದ ಬಾಲಕಿಯ ತಂದೆ ಮಕ್ಕಳ ಹಕ್ಕುಗಳ ಆಯೋಗದ ಮೊರೆ ಹೋಗಿದ್ದರು.

ಆಯೋಗದ ನಿರ್ದೇಶನದ ಮೇರೆಗೆ ಮಾವೇಲಿಕ್ಕರ ಪೊಲೀಸರು ಪ್ರಕರಣ ದಾಖಲಿಸಿದ್ದು, ಶೀಘ್ರದಲ್ಲೇ ನಟ ವಿನಾಯಗನ್ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆಯಲಾಗುವುದು ಎಂದು ತಿಳಿಸಿದ್ದಾರೆ. ಇದು ವಿನಾಯಗನ್ ವಿರುದ್ಧ ದಾಖಲಾಗಿರುವ ಮೊದಲ ಪ್ರಕರಣವಲ್ಲ; ಈ ಹಿಂದೆ ಸಹ ಅವರು ಹಲವು ವಿವಾದಗಳಲ್ಲಿ ಸಿಲುಕಿ ಬಂಧನಕ್ಕೊಳಗಾಗಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img