ವಿಜಯಸಾಕ್ಷಿ ಸುದ್ದಿ, ಗದಗ: 2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಸಿದ್ದಲಿಂಗನಗರ ಸರ್ಕಾರಿ ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಪರೀಕ್ಷೆಯಲ್ಲಿ ಶಾಲೆಗೆ ಭೂಮಿಕಾ ಶೇನ್ದ್ರೆ ಪ್ರಥಮ, ಉಮಾಮಹೇಶ್ವರಿ ಬುಕ್ಕಸಾಗರಮಠ ದ್ವಿತೀಯ ಹಾಗೂ ಮೇಹಕ್ ಇಲ್ಲಾಳ ತೃತೀಯ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದರು. ಸಾಧಕ ವಿದ್ಯಾರ್ಥಿನಿಯರನ್ನು ಗಣ್ಯರು ಅಭಿನಂದಿಸಿ, ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ, ಡಾ. ಬಸವರಾಜ ಧಾರವಾಡ, ಎಸ್.ಎಸ್. ಪಟ್ಟಣಶೆಟ್ಟಿ, ವಿದ್ಯಾವತಿ ಗಡಗಿ, ಎಂ.ಎಚ್. ಕಂಬಳಿ, ಶಂಕರ ಹಡಗಲಿ, ಐ.ಬಿ. ಬೆನಕಪ್ಪ, ಜಿ.ಎಂ. ಮುಂದಿನಮನಿ, ವಿ.ವಿ. ನಡುವಿನಮನಿ, ಬಿ.ಎಫ್. ಪೂಜಾರ, ಶರಣಪ್ಪ ನಾಗರಹಳ್ಳಿ, ಜಯಲಕ್ಷ್ಮಿ ಅಣ್ಣಿಗೇರಿ, ದತ್ತ ಪ್ರಸನ್ನ ಪಾಟೀಲ್, ಪ್ರಕಾಶ ಶೇನ್ದ್ರೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.



