ಫಂಡ್ ಎಬಿ ಅಡ್ಡೆ ಮೇಲೆ ಎಸ್ಪಿ ಶಿವಪ್ರಕಾಶ್ ನೇತೃತ್ವದಲ್ಲಿ ಪೊಲೀಸರ ದಾಳಿ; 14 ಲಕ್ಷ ರೂ. ಜಪ್ತಿ, ಗದಗನ ಜೂಜುಕೋರರು ಪರಾರಿ?
ವಿಜಯಸಾಕ್ಷಿ ಸುದ್ದಿ, ಗದಗ:
ಗದಗ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಲಕ್ಷ ಲಕ್ಷ ಹಣ ಪಟಕ್ಕಿಟ್ಟು ಅಂದರ್ ಬಾಹರ್ ಆಡುತ್ತಿದ್ದ ಓರ್ವ ಸರ್ಕಾರಿ ನೌಕರ ಸೇರಿದಂತೆ 17 ಜನರು ಅಂದರ್ ಆಗಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಿದರಹಳ್ಳಿ ಬಳಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿರುವ ಪೊಲೀಸರು ವಿವಿಧ ಜಿಲ್ಲೆಯ ಜೂಜುಕೋರರ ಹೆಡೆಮುರಿ ಕಟ್ಟಿದ್ದು, ಈ ಬಗ್ಗೆ ಗದಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವಿಜಯ ಬಿರಾದಾರ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ಪಂಢ್ ಅಡ್ಡೆಯ ಮೇಲೆ ದಾಳಿ ನಡೆಸಿದ ಖಾಕಿಪಡೆ 17 ಆರೋಪಿಗಳಿಂದ ಒಟ್ಟು 14.83 ಲಕ್ಷ ರೂ.ಗೂ ಅಧಿಕ ಹಣ, 04 ಕಾರು ಹಾಗೂ 18 ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ.
ಎಫ್‌ಡಿಎ ನೌಕರ, ಗುತ್ತಿಗೆ ನೌಕರ, ಚಾಲಕ, ವ್ಯಾಪಾರ, ಕೂಲಿ, ಹಮಾಲಿ, ಶೇತ್ಕಿ ಉದ್ಯೋಗ ಮಾಡುತ್ತಿದ್ದವರು ಇಸ್ಪೀಟು ಎಲೆ ಸಾಹಾಯದಿಂದ ಅಂದರ್ ಬಾಹರ್ ಆಟದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ವಿಚಿತ್ರವೆಂದರೆ ಗದಗ ಮೂಲದ 15ಕ್ಕೂ ಹೆಚ್ಚು ಆರೋಪಿಗಳು ಪರಾರಿಯಾಗಿದ್ದು, ಬೇರೆ ಜಿಲ್ಲೆಗಳಾದ ಚಿತ್ರದುರ್ಗ, ಹಾವೇರಿ, ದಾವಣಗೆರೆ, ವಿಜಯನಗರ, ಬಳ್ಳಾರಿಯ ಆರೋಪಿಗಳು ಅಂದರ್ ಆಗಿರುವುದು ಅಚ್ಚರಿಗೆ ಕಾರಣವಾಗಿದೆ. ಸಿಕ್ಕ ಆರೋಪಿಗಳ ಮೇಲೆ ಕೆ.ಪಿ ಆ್ಯಕ್ಟ್ 87 ಕಲಂನಡಿ ಸ್ವಂತ ಲಾಭಕ್ಕಾಗಿ ಜೂಜಾಟ ಕೇಸ್ ದಾಖಲಿಸಲಾಗಿದೆ.
ಗದಗ ಜಿಲ್ಲೆಯಾದ್ಯಂತ ಬಹಳ ದಿನಗಳಿಂದ ಆಯಾ ಕಟ್ಟಿನ ಜಾಗಗಳಲ್ಲಿ ಫಂಡ್ ಗೇಮ್ ನಡೆಯುತ್ತಲಿದೆ. ಇದು ಪೊಲೀಸರಿಗೂ ಗೊತ್ತಿದೆ. ಆದರೆ, ಎಲ್ಲವೂ ಗೊತ್ತಿದ್ದರೂ ಗೊತ್ತಿಲ್ಲದಂತೆ ಜಾಣ ಮೌನವಹಿಸಿದ್ದ ಪೊಲೀಸ್ ಅಧಿಕಾರಿಗಳು ದಿಢೀರ್ ಅಂತಾ ಫಂಡ್ ಅಡ್ಡೆಯ ಮೇಲೆ ದಾಳಿ ನಡೆಸಿದ್ದು ಯಾಕೆ? ಎಂಬ ಮಾತುಗಳು ಕೇಳಿ ಬರುತ್ತಿವೆ. ಕಳೆದ ವರ್ಷ ಮೇನಲ್ಲಿ ಫಂಡ್ ಅಡ್ಡೆಯ ಮೇಲೆ ನಡೆದ ದಾಳಿಯ ಬಳಿಕ ಅತ್ತಕಡೆಗೆ ಗಮನ ಹರಸದ ಪೊಲೀಸರು ಪುನಃ ಘರ್ಜಸಿದ್ದಾರೆ.
ಫಂಡ್ ಗೇಮ್ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ವಿಜಯ ಬಿರಾದಾರ, ಇನ್ಸ್‌ಪೆಕ್ಟರ್ ಮಹಾಂತೇಶ್ ಟಿ. ಹಾಗೂ 10ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.
ಓರ್ವ ಸರ್ಕಾರಿ ನೌಕರ ಬಲೆಗೆ
ಫಂಡ್ ಗೇಮ್ ವೇಳೆ ಸಿಕ್ಕಿಬಿದ್ದ 17 ಜನರ ಪೈಕಿ ಓರ್ವ ಸರ್ಕಾರಿ ನೌಕರ ಹಾಗೂ ಹೊರಗುತ್ತಿಗೆ ನೌಕರ ಇದ್ದಾರೆ. ಹೂವಿನಹಡಗಲಿಯ ಮಾಗಳ ಹೈಸ್ಕೂಲ್‌ನಲ್ಲಿ ಎಫ್‌ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿ.ಆರ್.ವೆಂಕಟೇಶ ನಾಯಕ ಹಾಗೂ ಚಿತ್ರದುರ್ಗದ ಸರ್ವೇ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರನಾಗಿರುವ ಕಾಶಿವಿಶ್ವನಾಥ ಶಿವಣ್ಣ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.
ಜೂಜಾಟದ ವೇಳೆ ಸಿಕ್ಕಿಬಿದ್ದವರು:
1) ಎಂ.ತಿಪ್ಪೇಸ್ವಾಮಿ ಮಲ್ಲೇಶಪ್ಪ (42)
ಕೊಟ್ಟೂರ, ಡ್ರೈವರ್. 2) ಕೊಟ್ರಯ್ಯ ಮರಿಕೊಟ್ರಯ್ಯ (51) ಕೊಟ್ಟೂರ, ವ್ಯಾಪಾರಸ್ಥ. 3) ಕೊಮಾರೆಪ್ಪ ಸಣ್ಣದುರಗಪ್ಪ ಬಣಕಾರ (50) ಕೊಟ್ಟೂರ, ಕೂಲಿ.
4) ಶಿವು ಬುಳ್ಳಮ್ಮ (19) ಕೊಟ್ಟೂರ, ಹಮಾಲಿ.
5) ಬಿ.ಆರ್.ವೆಂಕಟೇಶ ನಾಯಕ (42) ಹೂವಿನಹಡಗಲಿ. ಎಫ್‌ಡಿಎ ಮಾಗಳ ಹೈಸ್ಕೂಲ್.
6) ಚಂದ್ರಶೇಖರ ಸಿದ್ದಪ್ಪ (28) ಚಿತ್ರದುರ್ಗ, ಡ್ರೈವರ್.
7) ಲೋಕೇಶ ಮಲ್ಲೇಶಪ್ಪ ಪತ್ರಿ (32) ಹರಪನಹಳ್ಳಿ, ಶೇತ್ಕಿ. 8) ಅಶೋಕ ಮಲ್ಲಪ್ಪ ಮಡಿವಾಳರ (37) ತಂಗೋಡ, ಹೋಟೆಲ್ ಕೆಲಸ. 9) ಮಂಜುನಾಥ ರುದ್ರಮುನಿಯಪ್ಪ ಮುದ್ದಣ್ಣನವರ (28) ಕೂಡ್ಲಗಿ, ಕಾರು ಚಾಲಕ. 10) ನಾಗೇಶ ರೇವಣ್ಣ ಕೆ. (35),
ಕೂಡ್ಲಗಿ, ಶೇತ್ಕಿ. 11) ಎಸ್.ಕೊಟ್ರೇಶ ಶರಣಪ್ಪ (45) ವಿಜಯನಗರ, ಗುತ್ತಿಗೆದಾರ. 12) ಫಕ್ಕಿರಪ್ಪ ಬಸವರಾಜ ಕೂಡ್ಲಗಿ (31) ಹರಪನಹಳ್ಳಿ, ಡ್ರೈವರ್. 13) ರಾಜಶೇಖರ ಹನಮಂತಪ್ಪ ಬಾರಕೇರ (30) ದಾವಣಗೇರಿ, ಡ್ರೈವರ್. 14) ಎ.ಆನಂದ ಅಜಣ್ಣ (33) ಚಳಕೇರಿ, ಡ್ರೈವರ್. 15) ಎಂ.ರವಿಂದ್ರನಾಥ ಹನಮಂತ ನಾಯಕ (45) ದಾವಣಗೇರಿ, ಶೇತ್ಕಿ. 16) ಕಾಶಿವಿಶ್ವನಾಥ ಶಿವಣ್ಣ (24) ಚಿರ್ತದುರ್ಗ, ಗುತ್ತಿಗೆ ನೌಕರ ಸರ್ವೇ ಇಲಾಖೆ. 17) ದುರಗಪ್ಪ ಚಂದ್ರಪ್ಪ ಎಂ. (38) ವಿಜಯನಗರ, ಶೇತ್ಕಿ.