ಸಚಿವ ಸಿ.ಸಿ ಪಾಟೀಲ ಮನೆಯಲ್ಲಿ ನಾಗರಹಾವು ಪ್ರತ್ಯಕ್ಷ!

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:

Advertisement

ಹಾವು..! ಈ ಪದ ಕಿವಿಗೆ ಬೀಳುತ್ತಲೇ ಮೈ ಝುಮ್ಮೆನಿಸುತ್ತದೆ. ಒಂದು ಕ್ಷಣ ಮೈ ಮೇಲಿನ ರೋಮಗಳು ಎದ್ದು ನಿಲ್ಲುತ್ತವೆ. ಹಾವು ಕಂಡ ಭಯದಲ್ಲೇ ಹೊಡೆದು ಕೊಲ್ಲಬೇಕೆಂದು ಹಪಹಪಿಸುವವರೇ ಹೆಚ್ಚು. ಕಲ್ಲು ನಾಗರನಿಗೆ ಕೈಮುಗಿದು ಹಾಲೆರೆಯುವವರು, ನಿಜ ನಾಗರ ಕಂಡರೆ ಹೊಡೆಯುವವರ ಮಧ್ಯೆ ಹಾವುಗಳ ರಕ್ಷಕರ ಕಾರ್ಯ ನಿಜಕ್ಕೂ ಶ್ಲಾಘನೀಯ. ಸರಿಸೃಪಗಳ ಸಂರಕ್ಷಣೆಯಲ್ಲಿ ಇವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಹೌದು, ರಾಜ್ಯ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲರ ನರಗುಂದದ ಮನೆಯ ಕಂಪೌಂಡ್ ಒಳಗಡೆ ಸೋಮವಾರ ಹಾವು ಪ್ರತ್ಯಕ್ಷವಾಗಿದ್ದು, ಗೃಹ ರಕ್ಷಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

ನರಗುಂದ ಪಟ್ಟಣದಲ್ಲಿರುವ ಪಿಡಬ್ಲ್ಯೂಡಿ ಸಚಿವರ ಮನೆಯ ಕಂಪೌಂಡ್‌ನಲ್ಲಿ ಕಂಡ ೩-೪ ಅಡಿ ಉದ್ದದ ನಾಗರಹಾವನ್ನು ಹೋಮ್‌ಗಾರ್ಡ್ ಸಿಬ್ಬಂದಿ ಬುಡ್ಡಾ ಸುರೇಬಾನ ಸೆರೆ ಹಿಡಿದು, ಸುರಕ್ಷಿತ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ. ಅದರಂತೆ, ಸ್ನೇಕ್ ಬುಡ್ಡಾ ಅವರು ಕೇರೆ ಹಾವು (ರೆಡ್ ಸ್ನೇಕ್) ಸೇರಿದಂತೆ ಸೋಮವಾರ ಒಂದೇ ದಿನ ವಿವಿಧ ಜಾತಿಯ ಮೂರು ಹಾವುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿರುವ ಬುಡ್ಡಾ ಸುರೇಬಾನ ಅವರ ಸ್ನೇಕ್ ರೆಸ್ಕ್ಯೂ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here