HomeKarnataka Newsತದಡಿ ಅಳಿವೆಯಲ್ಲಿ ಹೂಳಿಗೆ ಸಿಲುಕಿ ಬೋಟ್ ಮುಳುಗಡೆ; ನಾಲ್ವರು ಮೀನುಗಾರರ ರಕ್ಷಣೆ

ತದಡಿ ಅಳಿವೆಯಲ್ಲಿ ಹೂಳಿಗೆ ಸಿಲುಕಿ ಬೋಟ್ ಮುಳುಗಡೆ; ನಾಲ್ವರು ಮೀನುಗಾರರ ರಕ್ಷಣೆ

For Dai;y Updates Join Our whatsapp Group

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಅಳಿವೆಯಲ್ಲಿ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್‌ವೊಂದು ಹೂಳಿನಲ್ಲಿ ಸಿಲುಕಿ ಮುಳುಗಡೆಯಾದ ಘಟನೆ ನಡೆದಿದೆ.

ಅದೃಷ್ಟವಶಾತ್ ಬೋಟ್‌ನಲ್ಲಿದ್ದ ನಾಲ್ವರು ಮೀನುಗಾರರನ್ನು ಸ್ಥಳೀಯರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ತದಡಿ ಬಂದರಿನಿಂದ ಮೋಹನ್ ಕಿಮಾನಿ ಎಂಬುವರಿಗೆ ಸೇರಿದ ‘ಶ್ರೀದೇವಿ’ ಹೆಸರಿನ ಬೋಟ್ ಮೀನುಗಾರಿಕೆಗೆ ತೆರಳುತ್ತಿದ್ದ ವೇಳೆ ತದಡಿ ಅಳಿವೆಯಲ್ಲಿನ ಹೂಳಿನಲ್ಲಿ ಸಿಲುಕಿಕೊಂಡಿದೆ. ಹೂಳಿಗೆ ಸಿಲುಕಿದ ಪರಿಣಾಮ ಬೋಟ್‌ನ ತಳಭಾಗಕ್ಕೆ ಹಾನಿಯಾಗಿದ್ದು, ಬಳಿಕ ನೀರು ಒಳನುಗ್ಗಿ ಅಳಿವೆಯಲ್ಲೇ ಬೋಟ್ ಮುಳುಗಡೆಯಾಗಿದೆ.

ಬೋಟ್‌ನಲ್ಲಿದ್ದ ನಾಲ್ವರು ಮೀನುಗಾರರು ಅಪಾಯಕ್ಕೆ ಸಿಲುಕಿದ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಮೀನುಗಾರರು ಕೂಡಲೇ ನೆರವಿಗೆ ಧಾವಿಸಿದ್ದಾರೆ. ಬಳಿಕ ನಾಲ್ವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತರಲಾಗಿದೆ.

ಬೋಟ್ ಮುಳುಗಡೆಯಿಂದ ₹15 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎನ್ನಲಾಗಿದೆ. ಬೋಟ್‌ನಲ್ಲಿದ್ದ ಮೀನುಗಾರಿಕಾ ಬಲೆ ಸೇರಿದಂತೆ ಹಲವು ಉಪಕರಣಗಳು ಹಾಗೂ ವಸ್ತುಗಳು ನೀರು ಪಾಲಾಗಿವೆ.

ತದಡಿ ಬಂದರಿನಲ್ಲಿ ಹೂಳು ಸಮಸ್ಯೆ:

ತದಡಿ ಬಂದರಿನ ಬಳಿ ಹಲವು ವರ್ಷಗಳಿಂದ ಹೂಳು ತುಂಬಿಕೊಂಡಿದ್ದು, ಇದರಿಂದ ಮೀನುಗಾರರಿಗೆ ಪದೇಪದೇ ಸಮಸ್ಯೆ ಎದುರಾಗುತ್ತಿದೆ. ಹೂಳಿಗೆ ಸಿಲುಕಿ ಬೋಟ್‌ಗಳಿಗೆ ಹಾನಿಯಾಗುವ ಘಟನೆಗಳು ಆಗಾಗ್ಗೆ ನಡೆಯುತ್ತಿದ್ದು, ಕೆಲ ಸಂದರ್ಭಗಳಲ್ಲಿ ಬೋಟ್‌ಗಳು ಮುಳುಗಡೆಯಾಗಿರುವ ಘಟನೆಗಳೂ ನಡೆದಿವೆ.

ಹೀಗಾಗಿ ತದಡಿ ಬಂದರಿನಲ್ಲಿ ಸಂಗ್ರಹವಾಗಿರುವ ಹೂಳನ್ನು ಕೂಡಲೇ ತೆರವುಗೊಳಿಸಬೇಕು. ಮೀನುಗಾರರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಂಡು, ಇಂತಹ ಅವಘಡಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸ್ಥಳೀಯ ಮೀನುಗಾರರು ಮೀನುಗಾರಿಕಾ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img