HomeEntertainment‘ಶಾರುಖ್ ನನ್ನ ಸ್ನೇಹಿತನಲ್ಲ, ಸಹೋದ್ಯೋಗಿ’: 16 ವರ್ಷಗಳ ಮೌನದ ಬಗ್ಗೆ ಸನ್ನಿ ಡಿಯೋಲ್ ಮಾತು

‘ಶಾರುಖ್ ನನ್ನ ಸ್ನೇಹಿತನಲ್ಲ, ಸಹೋದ್ಯೋಗಿ’: 16 ವರ್ಷಗಳ ಮೌನದ ಬಗ್ಗೆ ಸನ್ನಿ ಡಿಯೋಲ್ ಮಾತು

For Dai;y Updates Join Our whatsapp Group

ಮುಂಬೈ: ಬಾಲಿವುಡ್‌ನ ಎರಡು ದೊಡ್ಡ ಹೆಸರುಗಳಾದ ಸನ್ನಿ ಡಿಯೋಲ್ ಮತ್ತು ಶಾರುಖ್ ಖಾನ್ ನಡುವಿನ ಹಳೆಯ ಸಂಘರ್ಷ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. 1993ರ ‘ಡರ್’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಕ್ಲೈಮ್ಯಾಕ್ಸ್ ದೃಶ್ಯದ ವಿಚಾರವಾಗಿ ಇಬ್ಬರ ನಡುವೆ ದೊಡ್ಡ ಜಟಾಪಟಿ ನಡೆದಿತ್ತು. ಈ ವೇಳೆ ತೀವ್ರ ಕೋಪಗೊಂಡಿದ್ದ ಸನ್ನಿ ಡಿಯೋಲ್ ತಮ್ಮ ಕೈಗಳಿಂದಲೇ ಜೀನ್ಸ್ ಹರಿದುಕೊಂಡಿದ್ದಾಗಿ ಇದೀಗ ಹೇಳಿದ್ದಾರೆ.

ಇತ್ತೀಚಿನ ಸಂದರ್ಶನದಲ್ಲಿ ಈ ಘಟನೆಯ ಕುರಿತು ಮಾತನಾಡಿದ ಸನ್ನಿ, ಆ ಸಂದರ್ಭದಲ್ಲಿ ತಮ್ಮ ವಯಸ್ಸು ಕಡಿಮೆಯಾಗಿತ್ತು ಹಾಗೂ ನಟರಲ್ಲಿ ಕಂಡುಬರುವ ಅಭದ್ರತೆಯೂ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಅವರ ಪ್ರಕಾರ, ನಟರು ತಮ್ಮ ಪಾತ್ರದ ಮೇಲೆ ಮಾತ್ರ ಗಮನಹರಿಸಬೇಕು. ಆದರೆ ಪಾತ್ರಕ್ಕೆ ಸಿಗುವ ಪ್ರಾಮುಖ್ಯತೆ, ಪರದೆ ಮೇಲಿನ ಪ್ರಭಾವ ಸೇರಿದಂತೆ ಹಲವು ವಿಚಾರಗಳಲ್ಲಿ ಅಭದ್ರತೆ ಮೂಡಿದಾಗ ಅನಗತ್ಯ ಗೊಂದಲಗಳು ಸೃಷ್ಟಿಯಾಗುತ್ತವೆ.

‘ಡರ್’ನಲ್ಲಿ ಸನ್ನಿ ಡಿಯೋಲ್ ನಾಯಕನಾಗಿ ನಟಿಸಿದ್ದರೆ, ಶಾರುಖ್ ಖಾನ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಶಾರುಖ್ ನಿರ್ವಹಿಸಿದ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದ್ದು ಸನ್ನಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೇ ವಿಚಾರ ಕ್ಲೈಮ್ಯಾಕ್ಸ್ ದೃಶ್ಯದ ಸಂದರ್ಭದಲ್ಲಿ ದೊಡ್ಡ ವಿವಾದಕ್ಕೆ ತಿರುಗಿತ್ತು.

ಜಗಳದ ಬಳಿಕ ಇಬ್ಬರೂ ಸುಮಾರು 16 ವರ್ಷಗಳ ಕಾಲ ಪರಸ್ಪರ ಮಾತನಾಡಲಿಲ್ಲ. ಆದರೆ ತಾವು ಶಾರುಖ್ ಖಾನ್ ಅವರನ್ನು ಎಂದಿಗೂ ಶತ್ರುವಾಗಿ ನೋಡಿರಲಿಲ್ಲ ಎಂದು ಸನ್ನಿ ಸ್ಪಷ್ಟಪಡಿಸಿದ್ದಾರೆ.

ಇಂದಿನ ಸಂಬಂಧದ ಕುರಿತು ಮಾತನಾಡಿದ ಅವರು, “ಶಾರುಖ್ ಖಾನ್ ನನ್ನ ಸ್ನೇಹಿತನಲ್ಲ, ಅವರು ನನ್ನ ಸಹೋದ್ಯೋಗಿ” ಎಂಬ ನಿಲುವು ವ್ಯಕ್ತಪಡಿಸಿದ್ದಾರೆ. ಚಿತ್ರರಂಗದಲ್ಲಿ ಕೆಲಸ ಮಾಡುವವರನ್ನು ವೃತ್ತಿಪರ ಸಹೋದ್ಯೋಗಿಗಳಾಗಿ ನೋಡುವುದಾಗಿ ಹಾಗೂ ನಿಜವಾದ ಸ್ನೇಹ ಬಾಲ್ಯದಲ್ಲೇ ಸಿಗುತ್ತದೆ ಎಂದು ಹೇಳಿದ್ದಾರೆ.

ಸುಮಾರು ಒಂದೂವರೆ ದಶಕದ ಈ ಮೌನಕ್ಕೆ 2023ರಲ್ಲಿ ತೆರೆ ಬಿದ್ದಿತ್ತು. ಸನ್ನಿ ಡಿಯೋಲ್ ಅಭಿನಯದ ‘ಗದರ್ 2’ ಭರ್ಜರಿ ಯಶಸ್ಸು ಕಂಡ ಸಂದರ್ಭದಲ್ಲಿ ಇಬ್ಬರು ಮತ್ತೆ ಆತ್ಮೀಯವಾಗಿ ಭೇಟಿಯಾಗಿದ್ದರು. ಆ ಬಳಿಕ ‘ಡರ್’ ಕಾಲದ ವೈಮನಸ್ಸು ಕೊನೆಗೊಂಡಿತ್ತು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img