ವಿಜಯಸಾಕ್ಷಿ ಸುದ್ದಿ, ಗದಗ:
ಆಭರಣ ತಯಾರು ಮಾಡಿಕೊಡುವ ಪಶ್ಚಿಮ ಬಂಗಾಳ ಮೂಲದ ಅಸಾಮಿಯೊಬ್ಬ ಜ್ಯುವೆಲ್ಲರ್ಸ್ ಅಂಗಡಿ ಮಾಲೀಕನೊಬ್ಬನಿಗೆ ನೆಕ್ಲೆಸ್ ಮಾಡಿಕೊಡದೇ ವಂಚಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಹಕರೊಬ್ಬರ ಬೇಡಿಕೆಯಂತೆ 20 ಗ್ರಾಮ ತೂಕದ ಗಟ್ಟಿ ಬಂಗಾರವನ್ನು ನೆಕ್ಲೆಸ್ ಮಾಡಿಕೊಡಲು ಆಭರಣ ತಯಾರಿಕೆ ನಿಪುಣತೆ ಹೊಂದಿರುವ ಮೂಲತಃ ಪಶ್ಚಿಮ ಬಂಗಾಳದ, ಸದ್ಯ ಹನಮನಗರಡಿ ಬಳಿಯ ನಿವಾಸಿ ನವಾಬ್ ಅಲಿಯಾಸ್ ಹಸನ ಅಲಿ ಎಂಬಾತನಿಗೆ ಸ್ಟೇಷನ್ ರಸ್ತೆಯಲ್ಲಿ ಇರುವ ಡೈಮಂಡ್ ಜ್ಯುವೆಲ್ಲರ್ಸ್ ಅಂಗಡಿ ಮಾಲೀಕ ನಾಗರಾಜ್ ವಿಶ್ವನಾಥ ಸೇಠ್ ಎಂಬುವವರು ಮೇ 30ರಂದು ಕೊಟ್ಟಿದ್ದರು.
ನಾಲ್ಕೈದು ದಿನಗಳಲ್ಲಿ ನೆಕ್ಲೆಸ್ ಮಾಡಿಕೊಡುವುದಾಗಿ ಹೇಳಿ ಹೋಗಿದ್ದ ನವಾಬ್ ಅಲಿಯಾಸ್ ಹಸನ ಅಲಿ ಹೇಳಿದ ಮಾತಿಗೆ ತಪ್ಪಿದ್ದಾನೆ. ಅಷ್ಟೇ ಅಲ್ಲದೆ ಮರಳಿ ಬಂಗಾರವನ್ನು ನೀಡದೆ ವಂಚಿಸಿದ್ದಾನೆ. ಇದರಿಂದಾಗಿ ಡೈಮಂಡ್ ಜ್ಯುವೆಲ್ಲರ್ಸ್ ಅಂಗಡಿ ಮಾಲೀಕ ನಾಗರಾಜ್ ಸೇಠ್ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.