ವಿಜಯಸಾಕ್ಷಿ ಸುದ್ದಿ, ಗದಗ:
ಅಕ್ರಮವಾಗಿ ಮಾರಾಟ ಮಾಡಲು ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ನರಗುಂದ ಪೊಲೀಸರು ಬಂಧಿಸಿದ್ದಾರೆ.
ರೋಣ ತಾಲ್ಲೂಕಿನ ಯಾವಗಲ್ ಗ್ರಾಮದ ಮಂಜುನಾಥ್ ನಿಂಗಪ್ಪ ಹೆಬಸೂರು ಎಂಬಾತ 3372 ರೂಪಾಯಿ ಮೌಲ್ಯದ ಮದ್ಯವನ್ನು ತನ್ನ ಗ್ರಾಮಕ್ಕೆ ಸಾಗಾಟ ಮಾಡುತ್ತಿದ್ದಾಗ ನರಗುಂದ ಠಾಣೆಯ ಎಎಸ್ಐ ಬಿ ಆರ್ ಸೊರಟೂರು ಹಾಗೂ ಸಿಬ್ಬಂದಿ ರೋಣ ಕ್ರಾಸ್ ಬಳಿ ದಾಳಿ ಮಾಡಿ ಬಂಧಿಸಿ, ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.