ವಿಜಯಸಾಕ್ಷಿ ಸುದ್ದಿ, ಗದಗ: ಗಾನಗಂಧರ್ವ ಕಲಾ ಟ್ರಸ್ಟ್ ಹಾಗೂ ನಾದಶ್ರೀ ಸಂಗೀತ ಪಾಠಶಾಲೆ, ಗದಗ ಇವರ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಕಾರದೊಂದಿಗೆ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಗವಾಯಿಗಳವರ 16ನೇ ಪುಣ್ಯಸ್ಮರಣೋತ್ಸವ ಹಾಗೂ ನಾದಶ್ರೀ ಸಂಗೀತ ಪಾಠಶಾಲೆಯ 3ನೇ ವಾರ್ಷಿಕೋತ್ಸವವನ್ನು ಸೆ.17ರಂದು ಸಂಜೆ 6 ಗಂಟೆಗೆ ನಗರದ ವಿವೇಕಾನಂದ ಬಡಾವಣೆಯ ನಾದಶ್ರೀ ಸಂಗೀತ ಪಾಠಶಾಲೆಯಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಗದಗ ಮುಕ್ಕಣ್ಣೇಶ್ವರ ಮಠದ ಸದ್ಗುರು ಪೂಜ್ಯ ಶ್ರೀ ಶಂಕರಾನಂದ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಮುಂಡರಗಿ ಬೃಹನ್ಮಠದ ವೀರೇಶ್ವರ ಶರಣರು ಸಮ್ಮುಖ ವಹಿಸುವರು. ಗಾನಗಂಧರ್ವ ಕಲಾ ಟ್ರಸ್ಟ್ ಅಧ್ಯಕ್ಷ ಬಿ.ಎಂ. ಪಂಚಾಕ್ಷರಿ ಅಧ್ಯಕ್ಷತೆ ವಹಿಸುವರು.
ಸೌಖ್ಯ ಆಸ್ಪತ್ರೆಯ ಮೂತ್ರರೋಗ ಶಸ್ತ್ರಚಿಕಿತ್ಸಕ ಹಾಗೂ ಮೂತ್ರಪಿಂಡ ಕಸಿ ತಜ್ಞ ಡಾ. ಪ್ರವೀಣ ಡಂಬಳ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಕಾರ್ಯಕ್ರಮ ಉದ್ಘಾಟಿಸುವರು.
ಇದೇ ಸಂದರ್ಭದಲ್ಲಿ ಜಯದೇವಿ ಎ. ಕವಲೂರ ಅವರಿಗೆ ‘ಶ್ರೀಗುರು ಪುಟ್ಟರಾಜ ಪುರಸ್ಕಾರ’ ಶಿಕ್ಷಣ ಶ್ರೀ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕವಿತಾ ಕೆ. ಕೊನ್ನೂರು, ಸಿದ್ಧರಾಮಪ್ಪ ಶಿವನಣತ್ತಿ, ಬಸವರಾಜ ಅಂಗಡಿ ಹಾಗೂ ಗಂಗಣ್ಣ ಡಿ. ಮಲ್ಲಾಡದ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು.
ಸ್ವರನಮನ ಕಾರ್ಯಕ್ರಮದಲ್ಲಿ ಹನುಮಂತ ಎ. ಹೂಗಾರ ತಬಲಾ ವಾದನ, ಕುಮಾರಿ ಭಾಗ್ಯ ಶೇಖರಯ್ಯ ವಿಭೂತಿ ಬಾನ್ಸುರಿ ವಾದನ ಪ್ರಸ್ತುತಪಡಿಸಲಿದ್ದು, ನಾದಶ್ರೀ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.



