ಶಿವಮೊಗ್ಗ: ದಸರಾ ಹಬ್ಬದ ಸಂದರ್ಭದಲ್ಲಿ ಹೊಸ ಕಾರು ಖರೀದಿಸಿದ ಸಂತಸ ಕ್ಷಣಾರ್ಧದಲ್ಲೇ ಆತಂಕಕ್ಕೆ ತಿರುಗಿದೆ.
ಶೋರೂಮ್ನಿಂದ ಹೊಸ ಕಾರನ್ನು ಹೊರತರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಮಾರುತಿ ಕಾರು ಶೋರೂಮ್ ಬಳಿ ಈ ಘಟನೆ ನಡೆದಿದೆ. ಹೊಸ ಕಾರು ಡೆಲಿವರಿ ಪಡೆದು ಶೋರೂಮ್ನಿಂದ ಹೊರಬರುತ್ತಿದ್ದಾಗ ಕಾರು ಏಕಾಏಕಿ ನಿಯಂತ್ರಣ ತಪ್ಪಿದೆ. ಮೊದಲು ಎದುರಿನ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದ ಕಾರು, ಬಳಿಕ ರಸ್ತೆಗೆ ನುಗ್ಗಿ ಸಂಚರಿಸುತ್ತಿದ್ದ ಬೈಕ್ಗೆ ಅಪ್ಪಳಿಸಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ, ಈ ಅಪಘಾತದ ದೃಶ್ಯ ಶೋರೂಮ್ನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಈ ಸಂಬಂಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಕುರಿತು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.



