ಚೆನ್ನೈ: ತಮಿಳುನಾಡಿನ ಚೆನ್ನೈನಲ್ಲಿ ಬೃಹತ್ ಮಾದಕ ವಸ್ತು ಕಳ್ಳಸಾಗಣೆ ಜಾಲವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು ಭೇದಿಸಿದ್ದಾರೆ.
ಬರೋಬ್ಬರಿ 700 ಕೋಟಿ ರೂಪಾಯಿ ಮೌಲ್ಯದ 70 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ನವೆಂಬರ್ 17ರಂದು ಖಚಿತ ಮಾಹಿತಿ ಆಧರಿಸಿ ಮಾಧವರಂನಲ್ಲಿರುವ ಐಸ್ ಕಾರ್ಖಾನೆಯ ಬಳಿ ಡಿಆರ್ಐ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಐಸ್ ತುಂಬಿಸಿಕೊಳ್ಳಲು ನಿಂತಿದ್ದ ಮೊಬೈಲ್ ಐಸ್ಕ್ರೀಂ ವ್ಯಾನ್ ಅನ್ನು ತಡೆದು ಪರಿಶೀಲನೆ ನಡೆಸಿದ್ದಾರೆ.
ವ್ಯಾನ್ನ ಫ್ರೀಜರ್ನಲ್ಲಿ ಬಚ್ಚಿಡಲಾಗಿದ್ದ ಹೆರಾಯಿನ್ ಬಂಡಲ್ಗಳು ಪತ್ತೆಯಾಗಿವೆ. ತಕ್ಷಣವೇ 70 ಕೆಜಿ ಹೆರಾಯಿನ್ ವಶಕ್ಕೆ ಪಡೆದ ಅಧಿಕಾರಿಗಳು, ದಕ್ಷಿಣ ತಮಿಳುನಾಡು ಮೂಲದ ಅಬ್ದುಲ್ ಶುಕ್ಕೂರ್ ಮತ್ತು ಶಫೀಕ್ ಅಹಮದ್ ಎಂಬುವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನವೆಂಬರ್ 18ರಂದು ಆಲಂದೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.










