ಗದಗ: ಗದಗ-ಬೆಟಗೇರಿ ಅವಳಿ ನಗರದ ವಿವಿಧ ಬಡಾವಣೆಗಳಿಗೆ ನ.21ರಂದು ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರು ಪೂರೈಕೆಯಾಗುವ ಪ್ರದೇಶಗಳು: ವಾರ್ಡ್ ನಂ.7ರಲ್ಲಿ ಶಿವಾಜಿನಗರ, ವಾರ್ಡ್ ನಂ.31 ಮತ್ತು 32ರಲ್ಲಿ ಅಮರೇಶ್ವರ ಗುಡಿ ಹತ್ತಿರ, ಶಿಕ್ಕಲಗಾರ ಓಣಿ, ಭಜಂತ್ರಿ ಓಣಿ, ಖಾಜಿಯವರ ಓಣಿ ಹಾಗೂ ದಾಸರ ಓಣಿ.
ವಾರ್ಡ್ ನಂ.4ರಲ್ಲಿ ಮಂಜುನಾಥ ನಗರ, ಕಣವಿ ಪ್ಲಾಟ್, 35 ಮನೆ, 200 ಮನೆ, ವಾಂಬೆ ಬಡಾವಣೆ, ಬಿ.ಎಸ್.ಎನ್.ಎಲ್. ಕಚೇರಿ ಹಿಂದೆ, ಅಜಯವರ ಮನೆ ಲೈನ್, ಕಣವಿಯವರ ಮನೆ ಲೈನ್ ಹಾಗೂ ಉಳಿದ ಭಾಗಗಳು.
ವಾರ್ಡ್ ನಂ.29ರಲ್ಲಿ ರಾಜೀವಗಾಂಧಿ ನಗರ, ಮರಿಗೌಡ್ರ ಲೈನ್ ಹಾಗೂ ಕೊಪ್ಪಳ ದವಾಖಾನೆ ಹತ್ತಿರ.
ವಾರ್ಡ್ ನಂ.21 ಮತ್ತು 22ರಲ್ಲಿ ವಿಜಯನಗರ ಶಾಲೆ ಹತ್ತಿರ.
ವಾರ್ಡ್ ನಂ.35ರಲ್ಲಿ ನೀಲಮ್ಮ ತಾಯಿ ಮಠ, ಆದರ್ಶ ನಗರ, ದೇವರಾಜ ಹಾಸ್ಟೆಲ್ ಲೈನ್, 20ನೇ ನಂಬರ್ ಶಾಲೆ ಹತ್ತಿರ, ಪತ್ತಾರ ಸರ್ ಲೈನ್ ಹಾಗೂ ಉಳಿದ ಭಾಗಗಳು.
ತಾಂತ್ರಿಕ ಕಾರಣಗಳಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾದಲ್ಲಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕು. ನಿಗದಿತ ಸಮಯದಲ್ಲಿ ನೀರು ಸಂಗ್ರಹಿಸಿಕೊಳ್ಳಬೇಕು. ಸಮಯ ಮುಗಿದ ಬಳಿಕ ನೀರು ಪೂರೈಕೆ ಸ್ಥಗಿತಗೊಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.









