• About
  • Advertise
  • Privacy & Policy
  • Contact
Friday, November 27, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home World News

ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹೆಸರಿಗೆ ನಿಷೇಧ! ಸರ್ಕಾರಿ ದಾಖಲೆಗಳಲ್ಲಿ ‘ಬೀಬಿ’ ಎಂದಷ್ಟೇ ಉಲ್ಲೇಖಿಸಲು ತಾಲಿಬಾನ್ ಆದೇಶ

Vijaya Sakshi News Desk by Vijaya Sakshi News Desk
November 27, 2026
in World News
ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹೆಸರಿಗೆ ನಿಷೇಧ! ಸರ್ಕಾರಿ ದಾಖಲೆಗಳಲ್ಲಿ ‘ಬೀಬಿ’ ಎಂದಷ್ಟೇ ಉಲ್ಲೇಖಿಸಲು ತಾಲಿಬಾನ್ ಆದೇಶ
0
SHARES
1
VIEWS
Share on Facebook

ಅಫ್ಘಾನಿಸ್ತಾನ: ಮಹಿಳೆಯರ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸಿರುವ ತಾಲಿಬಾನ್ ಆಡಳಿತ, ಇದೀಗ ಮಹಿಳೆಯರ ಹೆಸರಿನ ಬಳಕೆಗೂ ಕಡಿವಾಣ ಹಾಕಿದೆ.

ಅಫ್ಘಾನಿಸ್ತಾನದ ಉತ್ತರ ಭಾಗದಲ್ಲಿರುವ ಬಾಲ್ಖ್ ಪ್ರಾಂತ್ಯದಲ್ಲಿ ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು, ನ್ಯಾಯಾಲಯಗಳು ಹಾಗೂ ವೈದ್ಯಕೀಯ ದಾಖಲೆಗಳಲ್ಲಿ ಮಹಿಳೆಯರ ನಿಜವಾದ ಹೆಸರುಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಬದಲಿಗೆ ಮಹಿಳೆಯರನ್ನು ಕೇವಲ ‘ಬೀಬಿ’ ಎಂದು ಉಲ್ಲೇಖಿಸುವಂತೆ ಆದೇಶಿಸಲಾಗಿದೆ ಎಂದು ವರದಿಯಾಗಿದೆ.

ಮಜರ್-ಎ-ಷರೀಫ್ ಸೇರಿದಂತೆ ಬಾಲ್ಖ್ ಪ್ರಾಂತ್ಯದ ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಕ್ಲಿನಿಕ್‌ಗಳು ಮತ್ತು ಆಡಳಿತ ಕಚೇರಿಗಳಲ್ಲಿ ಈ ನಿಯಮ ಜಾರಿಗೊಳಿಸಲಾಗಿದೆ ಎನ್ನಲಾಗಿದೆ. ವೈದ್ಯಕೀಯ ಪ್ರಿಸ್ಕ್ರಿಪ್ಷನ್‌ಗಳು, ಲ್ಯಾಬ್ ವರದಿಗಳು ಹಾಗೂ ರೋಗಿಗಳ ನೋಂದಣಿ ಪುಸ್ತಕಗಳಲ್ಲೂ ಮಹಿಳೆಯರ ನಿಜವಾದ ಹೆಸರುಗಳ ಬದಲಿಗೆ ‘ಬೀಬಿ’ ಎಂದಷ್ಟೇ ನಮೂದಿಸಲಾಗುತ್ತಿದೆ.

ಈ ಆದೇಶದಿಂದ ಆರೋಗ್ಯ ಸೇವೆಗಳಲ್ಲಿ ಗೊಂದಲ ಉಂಟಾಗುವ ಆತಂಕ ವ್ಯಕ್ತವಾಗಿದೆ. ಒಂದೇ ಆಸ್ಪತ್ರೆಯಲ್ಲಿ ಹಲವು ಮಹಿಳಾ ರೋಗಿಗಳ ಹೆಸರು ಒಂದೇ ರೀತಿ ದಾಖಲಾಗುವುದರಿಂದ ಔಷಧಿ ಮತ್ತು ವೈದ್ಯಕೀಯ ಪರೀಕ್ಷಾ ವರದಿಗಳು ಅದಲುಬದಲಾಗುವ ಅಪಾಯವಿದೆ ಎಂದು ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಪುರುಷ ವೈದ್ಯರು ಮಹಿಳಾ ರೋಗಿಗಳನ್ನು ನೇರವಾಗಿ ಪರೀಕ್ಷಿಸುವುದಕ್ಕೆ ನಿರ್ಬಂಧಗಳಿರುವ ಹಿನ್ನೆಲೆಯಲ್ಲಿ, ಹೊಸ ಆದೇಶ ಮಹಿಳೆಯರ ಆರೋಗ್ಯ ಸೇವೆಗೆ ಮತ್ತಷ್ಟು ತೊಂದರೆ ಉಂಟುಮಾಡಬಹುದು ಎಂಬ ಆತಂಕವೂ ಎದುರಾಗಿದೆ.

ಮಹಿಳೆಯರ ಗುರುತಿನ ಹಕ್ಕಿಗೂ ನಿರ್ಬಂಧ:

ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಜೀವನದಲ್ಲಿ ಪಾಲ್ಗೊಳ್ಳುವಿಕೆಗೆ ತಾಲಿಬಾನ್ ಆಡಳಿತ ಹಲವು ನಿರ್ಬಂಧಗಳನ್ನು ವಿಧಿಸಿದೆ. ಕೆಲವು ಸ್ಥಳೀಯ ಸಮುದಾಯಗಳಲ್ಲಿ ಮಹಿಳೆಯರನ್ನು ಅವರ ಸ್ವಂತ ಹೆಸರಿನಿಂದ ಕರೆಯುವ ಬದಲು ಯಾರದೋ ಪತ್ನಿ ಅಥವಾ ಮಗಳು ಎಂದು ಗುರುತಿಸುವ ಪದ್ಧತಿಯೂ ಇದೆ. ಸಮಾಧಿ ಕಲ್ಲುಗಳ ಮೇಲೂ ಮಹಿಳೆಯರ ಹೆಸರುಗಳನ್ನು ಕೆತ್ತದಿರುವ ಸಂಪ್ರದಾಯ ಕೆಲವು ಪ್ರದೇಶಗಳಲ್ಲಿ ಕಂಡುಬರುತ್ತದೆ.

ಈ ಹಿನ್ನೆಲೆಯಲ್ಲಿ ಮಹಿಳೆಯರ ಹೆಸರುಗಳನ್ನು ಅಧಿಕೃತ ದಾಖಲೆಗಳಲ್ಲಿ ದಾಖಲಿಸುವಂತೆ ಒತ್ತಾಯಿಸಿ 2017ರಲ್ಲಿ ‘ವೇರ್ ಈಸ್ ಮೈ ನೇಮ್?’ ಎಂಬ ಅಭಿಯಾನ ಆರಂಭವಾಗಿತ್ತು. ಒಸ್ಮಾನಿ ಎಂಬುವವರು ಆರಂಭಿಸಿದ್ದ ಈ ಅಭಿಯಾನವು ಮಕ್ಕಳ ಜನನ ಪ್ರಮಾಣಪತ್ರಗಳಲ್ಲಿ ತಾಯಂದಿರ ಹೆಸರುಗಳನ್ನು ಸೇರಿಸುವ ಹೋರಾಟಕ್ಕೆ ವೇದಿಕೆಯಾಗಿತ್ತು.

ಜನನ ಪ್ರಮಾಣಪತ್ರದಲ್ಲೂ ತಾಯಿಯ ಹೆಸರು ಇಲ್ಲದ ಸಂಕಷ್ಟ:

ಗಡಿಪಾರಾಗಿರುವ ಅಫ್ಘಾನ್ ಪತ್ರಕರ್ತೆ ಖದೀಜಾ ಅಮೀನ್ ಕೂಡ ಮಹಿಳೆಯರ ಗುರುತಿನ ಸಮಸ್ಯೆಯಿಂದ ಸಂಕಷ್ಟ ಎದುರಿಸಿದ್ದರು. ಅವರ ಮಾಜಿ ಪತಿ ಮಕ್ಕಳೊಂದಿಗೆ ತೆರಳಿದ ಬಳಿಕ, ಮಕ್ಕಳ ಅಫ್ಘಾನ್ ಜನನ ಪ್ರಮಾಣಪತ್ರಗಳಲ್ಲಿ ತಾಯಿಯ ಹೆಸರೇ ಇಲ್ಲದ ಕಾರಣ ಯುರೋಪಿಯನ್ ಅಧಿಕಾರಿಗಳ ಮುಂದೆ ತಾವೇ ಮಕ್ಕಳ ತಾಯಿ ಎಂಬುದನ್ನು ಸಾಬೀತುಪಡಿಸಲು ಅವರಿಗೆ ಕಷ್ಟವಾಗಿತ್ತು.

ಮೇ ತಿಂಗಳಲ್ಲಿ ಬಾಲ್ಖ್ ಪ್ರಾಂತ್ಯದಲ್ಲಿ ಜಾರಿಯಾಗಿದೆ ಎನ್ನಲಾದ ಹೊಸ ಆದೇಶವು ಮಹಿಳೆಯರ ವೈಯಕ್ತಿಕ ಗುರುತನ್ನು ಅಧಿಕೃತ ದಾಖಲೆಗಳಿಂದಲೇ ದೂರ ಮಾಡುವ ಪ್ರಯತ್ನವಾಗಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಟೀಕಿಸಿವೆ.

Tags: Afghan WomenAfghanistan NewskannadanewsKarnatakaTaliban GovernmentTaliban RestrictionsVijayasakshivijayasakshinewsWomen Rights
ShareSendShare
Previous Post

ಬೆಂಗಳೂರಿನ ಪೆಟ್ರೋಲ್‌ನಲ್ಲಿ ಎಥನಾಲ್ ಗೋಲ್‌ಮಾಲ್? IOCL ಟರ್ಮಿನಲ್‌ಗೆ ಸರ್ಕಾರದ ನೋಟಿಸ್!

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Vijaya Sakshi E-Paper 27 Nov 2026
27 Nov 2026
Read E-Paper
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

November 19, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹೆಸರಿಗೆ ನಿಷೇಧ! ಸರ್ಕಾರಿ ದಾಖಲೆಗಳಲ್ಲಿ ‘ಬೀಬಿ’ ಎಂದಷ್ಟೇ ಉಲ್ಲೇಖಿಸಲು ತಾಲಿಬಾನ್ ಆದೇಶ

ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹೆಸರಿಗೆ ನಿಷೇಧ! ಸರ್ಕಾರಿ ದಾಖಲೆಗಳಲ್ಲಿ ‘ಬೀಬಿ’ ಎಂದಷ್ಟೇ ಉಲ್ಲೇಖಿಸಲು ತಾಲಿಬಾನ್ ಆದೇಶ

November 27, 2026
ಬೆಂಗಳೂರಿನ ಪೆಟ್ರೋಲ್‌ನಲ್ಲಿ ಎಥನಾಲ್ ಗೋಲ್‌ಮಾಲ್? IOCL ಟರ್ಮಿನಲ್‌ಗೆ ಸರ್ಕಾರದ ನೋಟಿಸ್!

ಬೆಂಗಳೂರಿನ ಪೆಟ್ರೋಲ್‌ನಲ್ಲಿ ಎಥನಾಲ್ ಗೋಲ್‌ಮಾಲ್? IOCL ಟರ್ಮಿನಲ್‌ಗೆ ಸರ್ಕಾರದ ನೋಟಿಸ್!

November 27, 2026
ವಿದ್ಯುತ್ ದುರಸ್ತಿ ಮುಗಿಸಿ ವಾಪಸ್ ಆಗುವಾಗ ದುರಂತ;  ಹಿಟ್‌ ಆ್ಯಂಡ್‌ ರನ್‌ಗೆ ಲೈನ್‌ಮ್ಯಾನ್ ಸಾವು

ವಿದ್ಯುತ್ ದುರಸ್ತಿ ಮುಗಿಸಿ ವಾಪಸ್ ಆಗುವಾಗ ದುರಂತ; ಹಿಟ್‌ ಆ್ಯಂಡ್‌ ರನ್‌ಗೆ ಲೈನ್‌ಮ್ಯಾನ್ ಸಾವು

November 27, 2026
ಯುವಜನರ ನಿರೀಕ್ಷೆ ಏನು? ಬಜೆಟ್‌ಗೂ ಮುನ್ನ Gen-Z ಅಭಿಪ್ರಾಯ ಪಡೆದ ನಿರ್ಮಲಾ ಸೀತಾರಾಮನ್

ಯುವಜನರ ನಿರೀಕ್ಷೆ ಏನು? ಬಜೆಟ್‌ಗೂ ಮುನ್ನ Gen-Z ಅಭಿಪ್ರಾಯ ಪಡೆದ ನಿರ್ಮಲಾ ಸೀತಾರಾಮನ್

November 27, 2026

Recent News

4
ಯುವಜನರ ನಿರೀಕ್ಷೆ ಏನು? ಬಜೆಟ್‌ಗೂ ಮುನ್ನ Gen-Z ಅಭಿಪ್ರಾಯ ಪಡೆದ ನಿರ್ಮಲಾ ಸೀತಾರಾಮನ್

ಯುವಜನರ ನಿರೀಕ್ಷೆ ಏನು? ಬಜೆಟ್‌ಗೂ ಮುನ್ನ Gen-Z ಅಭಿಪ್ರಾಯ ಪಡೆದ ನಿರ್ಮಲಾ ಸೀತಾರಾಮನ್

November 27, 2026
1
Vijaya Sakshi News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹೆಸರಿಗೆ ನಿಷೇಧ! ಸರ್ಕಾರಿ ದಾಖಲೆಗಳಲ್ಲಿ ‘ಬೀಬಿ’ ಎಂದಷ್ಟೇ ಉಲ್ಲೇಖಿಸಲು ತಾಲಿಬಾನ್ ಆದೇಶ

ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹೆಸರಿಗೆ ನಿಷೇಧ! ಸರ್ಕಾರಿ ದಾಖಲೆಗಳಲ್ಲಿ ‘ಬೀಬಿ’ ಎಂದಷ್ಟೇ ಉಲ್ಲೇಖಿಸಲು ತಾಲಿಬಾನ್ ಆದೇಶ

November 27, 2026
ಬೆಂಗಳೂರಿನ ಪೆಟ್ರೋಲ್‌ನಲ್ಲಿ ಎಥನಾಲ್ ಗೋಲ್‌ಮಾಲ್? IOCL ಟರ್ಮಿನಲ್‌ಗೆ ಸರ್ಕಾರದ ನೋಟಿಸ್!

ಬೆಂಗಳೂರಿನ ಪೆಟ್ರೋಲ್‌ನಲ್ಲಿ ಎಥನಾಲ್ ಗೋಲ್‌ಮಾಲ್? IOCL ಟರ್ಮಿನಲ್‌ಗೆ ಸರ್ಕಾರದ ನೋಟಿಸ್!

November 27, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper