ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
Advertisement
  
ಪಟ್ಟಣದ ಗದಗ ರಸ್ತೆಯಲ್ಲಿನ ಟ್ರ‍್ಯಾಕ್ಟರ್ ಗ್ಯಾರೇಜ್‌ಗೆ ಶುಕ್ರವಾರ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಗ್ಯಾರೇಜ್‌ನಲ್ಲಿನ ಎಲ್ಲ ಉಪಕರಣಗಳು ಸುಟ್ಟು ಕರಕಲಾಗಿವೆ. ದಾದಾಪೀರ ಅಲ್ಲಾಸಾಬ ಮುಳುಗುಂದ ಅವರಿಗೆ ಸೇರಿದ ಗ್ಯಾರೇಜ್ ಇದಾಗಿದೆ.
ಗ್ಯಾರೇಜನಲ್ಲಿ ಟ್ರ್ಯಾಕರ್ ರಿಪೇರಿ ಮಾಡಲು ಬಳಸುವ ಉಪಕರಣಗಳು, ಆಯಿಲ್ ಪಾಕೆಟ್, ಫಿಲ್ಟರ್, ಪ್ಯಾಕಿಂಗ್ ಕಿಟ್, ಒರಿಂಗ್, ರಬ್ಬರ್ ಪೈಪ್, ಬ್ಯಾಟರಿ ಸೇರಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಸುದ್ದಿ ತಿಳಿದು ಗ್ಯಾರೇಜ್ ಮಾಲೀಕರು ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ಬಸವರಾಜ ಕಾತ್ರಾಳ ಬೇಟಿ ನೀಡಿ ಪರಿಶೀಲಿಸಿ ಹಾನಿಯ ಅಂದಾಜು ಮಾಹಿತಿ ತಹಸೀಲ್ದಾರರಿಗೆ ಸಲ್ಲಿಸಿದ್ದಾರೆ.


