ವಿಜಯಸಾಕ್ಷಿ ಸುದ್ದಿ, ಬೆಟಗೇರಿ
ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದಾಗ ಬೆಟಗೇರಿ ಠಾಣೆಯ ಪೊಲೀಸರು ದಾಳಿ ನಡೆಸಿ ಆರೋಪಿಯೊಬ್ಬನನ್ನು ವಶಕ್ಕೆ ಪಡೆದಿದ್ದು, ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಆರೋಪಿತರಾದ ಬೆಟಗೇರಿಯ ಗಣೇಶನಗರದ ಸಚಿನ್ ಪರಶುರಾಮ ಭಜಂತ್ರಿ ಹಾಗೂ ಶಿವು ಶೀಲವಂತ ಇವರಿಬ್ಬರೂ ಏ.8ರ ರಾತ್ರಿ 8.30ರ ಸುಮಾರಿಗೆ ಬೆಟಗೇರಿಯ ಶರಣ ಬಸವೇಶ್ವರ ನಗರದ ಶಾಲೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಚೆನ್ನೈ ಸುಪರ್ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಐಪಿಎಲ್ 20-20 ಪಂದ್ಯದ ಸ್ಕೋರ್ ಹಾಗೂ ಫಲಿತಾಂಶದ ಮೇಲೆ ಬೆಟ್ಟಿಂಗ್ನಲ್ಲಿ ತೊಡಗಿದ್ದರು.
ಸಾರ್ವಜನಿಕರಿಂದ ಹಣ ಕಟ್ಟಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಬೆಟಗೇರಿ ಪೊಲೀಸ್ ಠಾಣೆಯ ಪಿಎಸ್ಐ ವಿಠಲ ಹಾವನ್ನವರ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದಾಗ, ಮೊದಲನೇ ಆರೋಪಿ ಸಚಿನ್ ಭಜಂತ್ರಿ ಸಿಕ್ಕಿಬಿದ್ದಿದ್ದು, 2ನೇ ಆರೋಪಿ ಶಿವು ಶೀಲವಂತ ಪರಾರಿಯಾಗಿದ್ದಾನೆ.
ಆರೋಪಿತನಿಂದ 3 ಸಾವಿರ ರೂ. ನಗದು ಹಾಗೂ ಬೆಟ್ಟಿಂಗ್ ಬರೆದ ನೋಟ್ಬುಕ್ನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತರ ವಿರುದ್ಧ ಕಲಂ 78(3) ಕೆ.ಪಿ. ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.