ಮಹಿಳೆಯೊಬ್ಬಳ ಕೊಲೆ ಆರೋಪದಲ್ಲಿ ಜೈಲು ಪಾಲಾಗಿದ್ದ……..
ವಿಜಯಸಾಕ್ಷಿ ಸುದ್ದಿ, ಗದಗ
ವಿಚಾರಣಾಧೀನ ಖೈದಿಯೊಬ್ಬ ಸಬ್ ಜೈಲಿನಲ್ಲಿ ಬ್ಲೇಡ್ನಿಂದ ಕತ್ತು ಕೊಯ್ದಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಮುಂಜಾನೆ ನಡೆದಿದೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಕುರುಗೋವಿನಕೊಪ್ಪದ ಬಸಪ್ಪ ನಾಗಪ್ಪ ಚಂದ್ರ (50) ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ವಿಚಾರಣಾಧೀನ ಖೈದಿ.
ಬೆಟಗೇರಿಯ ಸಬ್ ಜೈಲಿನಲ್ಲಿ ಈ ಘಟನೆ ನಡೆದಿದ್ದು, ವಿಚಾರಣಾಧೀನ ಖೈದಿಗಳನ್ನು ಉಪಹಾರಕ್ಕೆ ಕರೆದಿದ್ದ ವೇಳೆ ಬಾತ್ ರೂಮ್ ನಲ್ಲಿ ಹೋಗಿ ಬ್ಲೇಡ್ ನಿಂದ ಕತ್ತು ಕೊಯ್ದಕೊಂಡಿದ್ದಾನೆ. ಉಪಹಾರ ಸೇವಿಸಲು ಬಸಪ್ಪ ಬಾರದಿದ್ದಾಗ ಜೈಲು ಸಿಬ್ಬಂದಿ ಸ್ಥಳಕ್ಕೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ತಕ್ಷಣವೇ ಜೈಲು ಸಿಬ್ಬಂದಿ ಬಸಪ್ಪನನ್ನು ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಜಿಮ್ಸ್ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದು, ಸ್ಥಿತಿ ಗಂಭೀರವಾಗಿದೆ.
ಇದನ್ನೂ ಓದಿ ಮಹಿಳೆ ಭೀಕರ ಕೊಲೆ; ಕೊಲೆಗೈದು ಕುಡುಗೋಲು ಸಮೇತ ಠಾಣೆಗೆ ಶರಣಾದ ಆರೋಪಿ!
2022ರ ಡಿಸೆಂಬರ್ 18ರಂದು ನರಗುಂದ ತಾಲೂಕಿನ ಕುರುಗೋವಿನಕೊಪ್ಪ ಗ್ರಾಮದಲ್ಲಿ ನಡೆದಿದ್ದ ಮಹಿಳೆಯೊಬ್ಬಳ ಕೊಲೆ ಆರೋಪದಲ್ಲಿ ಬಸಪ್ಪ ಜೈಲು ಪಾಲಾಗಿದ್ದು, ವಿಚಾರಣೆ ನಡೆಯುತ್ತಿದೆ.
ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.