ಮಧ್ಯಾಹ್ನ ಒಂದು ಗಂಟೆಯವರೆಗೆ ಮತದಾನದ ವಿವರ…..
ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯಲ್ಲಿ ಮತದಾನ ಚುರುಕು ಪಡೆದಿದ್ದು, ಮತದಾರರು ಸಾಲುಗಟ್ಟಿ ನಿಂತು ಮತ ಚಲಾಯಿಸುತ್ತಿದ್ದಾರೆ. ಮಧ್ಯಾಹ್ನ ಒಂದು ಗಂಟೆಯವರೆಗೆ ಶೇ-38.98 ರಷ್ಟು ಮತದಾನವಾಗಿದೆ.
ಅತಿ ಹೆಚ್ಚು ಮತದಾನ ನರಗುಂದ ತಾಲೂಕಿನಲ್ಲಿ ಆಗಿದ್ದು, 42.41 ರಷ್ಟು ಮತದಾನವಾಗಿದೆ.
ಉಳಿದಂತೆ ಗದಗ ತಾಲೂಕಿನಲ್ಲಿ ಶೇಕಡಾವಾರು 40.50, ರೋಣ ತಾಲೂಕಿನಲ್ಲಿ 40.46, ಶಿರಹಟ್ಟಿ ತಾಲೂಕಿನಲ್ಲಿ 33.16 ರಷ್ಟು ಮತದಾನವಾಗಿದೆ.
ಹಾಗೆಯೇ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದೊಡ್ಡೂರು ತಾಂಡಾದ ನಿವಾಸಿಗಳು ಮತಗಟ್ಟೆ ಸ್ಥಾಪನೆ ಮಾಡದ ಕಾರಣಕ್ಕಾಗಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಗ್ರಾಮಸ್ಥರು, ಇಲ್ಲಿಂದ ಮೂರು ಕಿಲೋಮೀಟರ್ ದೂರದಲ್ಲಿ ಮತಗಟ್ಟೆ ಇರುವುದರಿಂದ ನಾವು ಮತದಾನ ಮಾಡುವುದಿಲ್ಲ ಎಂದಿದ್ದಾರೆ. ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.