ಪ್ರಿಯಕರನ ಜೊತೆ ಸೇರಿ ಪತಿಗೆ ಚಟ್ಟ ಕಟ್ಟಿದ ಪತ್ನಿ; ಆತ್ಮಹತ್ಯೆ ಎಂದು ಬಿಂಬಿಸಲು ಹೋಗಿ ಪೊಲೀಸರ ಖೆಡ್ಡಾಗೆ ಬಿದ್ದ ಆರೋಪಿಗಳು…..

0
Spread the love

ಪ್ರಕರಣ ಭೇದಿಸಿದ ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ಪ್ರಶಂಸೆ…..

Advertisement

ವಿಜಯಸಾಕ್ಷಿ ಸುದ್ದಿ, ಗುರುಮಠಕಲ್

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನೇ ಪ್ರಿಯಕರನ ಜೊತೆಗೆ ಸೇರಿ ಚಟ್ಟ ಕಟ್ಟಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಂಬಿಸಲು ಹೋಗಿದ್ದ ಪ್ರಕರಣವನ್ನು ಗುರುಮಠಕಲ್ ಪೊಲೀಸರು ಭೇದಿಸಿದ್ದಾರೆ.

ಪ್ರಕರಣದ ವಿವರ: 16-06-2023 ರಂದು
ಯಾದಗಿರಿ ಜಿಲ್ಲೆಯ ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕೊಂಕಲ್ ಗ್ರಾಮದ ಜಮೀನೊಂದರ ಮರದಲ್ಲಿ ವ್ಯಕ್ತಿಯೊಬ್ಬನ ಶವ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತನನ್ನು ಅದೇ ಗ್ರಾಮದ ಕಾಶಪ್ಪ ತಂದೆ ನಾಗಪ್ಪ ಮಲ್ಲಪ್ಪೋಳ ಎಂದು ಗುರುತಿಸಲಾಗಿತ್ತು.

ಮೃತನ ಸಹೋದರಿ ಕಾಶಮ್ಮ ಮೃತ ಕಾಶಪ್ಪನ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.

08/2023 ಕಲಂ 174(ಸಿ) ಸಿ.ಆರ್. ಪಿ. ಸಿ ಅಡಿಯಲ್ಲಿ
ಪ್ರಕರಣ ದಾಖಲು ಮಾಡಿಕೊಂಡ ಗುರುಮಠಕಲ್ ಪೊಲೀಸರು, ಪ್ರಕರಣ ಭೇದಿಸಲು ತಂಡ ರಚಸಿ ತನಿಖೆ ಕೈಗೊಂಡ ಪೊಲೀಸರು, ಕೊಲೆಗೀಡಾದ ಕಾಶಪ್ಪನ ಪತ್ನಿ ಅನಿತಾ ಹಾಗೂ ಅವಳ ಪ್ರಿಯಕರ ನಾಗೇಶ್ ತಂದೆ ಮಲ್ಲಪ್ಪ ಹತ್ತಿಕುಣಿಯನ್ನು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

ಅನಿತಾ ಹಾಗೂ ನಾಗೇಶ್ ಜೂನ್ 15 ರಂದು ರಾತ್ರಿ ಕಾಶಪ್ಪ ಮಲಗಿಕೊಂಡಾಗ ಆತನ ಕುತ್ತಿಗೆಗೆ ಹಗ್ಗ ಬಿಗಿದು ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಬೈಕಿನಲ್ಲಿ ಸಮೀಪದ ಜಮೀನೊಂದರಲ್ಲಿ ತೆಗೆದುಕೊಂಡು ಹೋಗಿ ಮರಕ್ಕೆ ಶವವನ್ನು ತೂಗು ಹಾಕಿ ಕಾಶಪ್ಪನೇ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಹೋಗಿದ್ದರು ಎನ್ನಲಾಗಿದೆ.

ಎಸ್ಪಿ ಹಾಗೂ ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಗುರುಮಠಕಲ್ ಪೊಲೀಸ್ ಇನ್ಸ್‌ಪೆಕ್ಟರ್ ದೌಲತ್ ಎನ್. ಕೆ ಅವರ ನೇತೃತ್ವದಲ್ಲಿ ಪಿಎಸ್ಐ ಭೀಮರಾಯ ಹಾಗೂ ಸಿಬ್ಬಂದಿಗಳಾದ ನರಸಿಂಗರಾವ, ವಿಶ್ವನಾಥರೆಡ್ಡಿ, ದೇವೆಂದ್ರ, ನರೇಂದ್ರರೆಡ್ಡಿ, ರಹೀಮ್, ಮಹ್ಮದ ಶರೀಫ, ನರಸಿರೆಡ್ಡಿ ಸಾಹೇಬರೆಡ್ಡಿ, ಅಶೋಕ, ಹಾಗೂ ರಾಮಲಿಂಗಪ್ಪ ತಂಡವನ್ನು ರಚಿಸಲಾಗಿತ್ತು.

ತನಿಖಾ ತಂಡ ಸ್ಥಳೀಯರಿಂದ ಹಾಗೂ ವೈಜ್ಞಾನಿಕವಾಗಿ ಮಾಹಿತಿ ಸಂಗ್ರಹಿಸಿ ಕೊಲೆ ಮಾಡಿದ್ದ ಕಾಶಪ್ಪನ ಪತ್ನಿ ಅನಿತಾ ಹಾಗೂ ಅವಳ ಪ್ರಿಯಕರನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕೊಲೆ ಪ್ರಕರಣ ಭೇದಿಸುವಲ್ಲಿ ಶ್ರಮಿಸಿದ ತನಿಖಾ ತಂಡಕ್ಕೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here