ಉಕ್ಕಿ ಹರಿದ ಹಳ್ಳ-ಕೊಳ್ಳಗಳು….
Advertisement
ವಿಜಯಸಾಕ್ಷಿ ಸುದ್ದಿ, ಗದಗ
ಗದಗ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಭಾರಿ ಮಳೆ ಸುರಿದಿದ್ದು, ವಾಹನ ಸವಾರರು ಪರದಾಡಿದ ಘಟನೆ ಜರುಗಿದೆ.

ಗದಗ, ಹುಲಕೋಟಿ, ನಾಗಾವಿ ಹಾಗೂ ಅಸುಂಡಿ ಗ್ರಾಮಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿದವು.
ಹುಲಕೋಟಿಯಲ್ಲಿ ಮಳೆ ನೀರು ರಸ್ತೆಯಲ್ಲಿ ನಿಂತಿದ್ದರಿಂದ ಬೈಕ್ ಗಳು ನೀರಿನಲ್ಲಿ ನಿಲ್ಲುವಂತಾಯಿತು. ಶಾಲಾ ಮಕ್ಕಳು, ಸಾರ್ವಜನಿಕರು ಪರದಾಡಿದರು. ಕುರ್ತಕೋಟಿ ರಸ್ತೆಯ ಹಳ್ಳಗಳು ತುಂಬಿ ಹರಿದವು.