ವಿಜಯಸಾಕ್ಷಿ ಸುದ್ದಿ, ಗದಗ
ಚಲಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ನ ಹಿಂಬದಿ ಟೈಯರ್ ವೊಂದು (ಚಕ್ರ) ಏಕಾಏಕಿ ಕಟ್ ಆಗಿ ರಸ್ತೆಯ ಬದಿಗೆ ಉರುಳಿದ ಘಟನೆ ನಿನ್ನೆ ಸಂಜೆ ಜರುಗಿದೆ. ಈ ಘಟನೆಯಿಂದ ಬಸ್ ನಲ್ಲಿದ್ದ ಪ್ರಯಾಣಿಕರು ಕೆಲಕಾಲ ಬೆಚ್ಚಿಬಿದ್ದಿದ್ದಾರೆ. ಆದರೆ ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಇದನ್ನೂ ಓದಿ ಚುನಾವಣೆ ಕರ್ತವ್ಯಕ್ಕೆ ಅಡ್ಡಿಪಡಿಸಿದ 14 ಜನ ಆರೋಪಿತರಿಗೆ ಶಿಕ್ಷೆ
ಗದಗ ತಾಲೂಕಿನ ಹೊಂಬಳ ಗ್ರಾಮದ ಬಳಿ ನಡೆದಿರುವ ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.
ಗದಗನಿಂದ ನರಗುಂದ ಪಟ್ಟಣಕ್ಕೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಐವತ್ತಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದೆ.
ಗದಗ ಡಿಪೋಗೆ ಈ ಬಸ್ ಸೇರಿದ್ದು, ಹೊಂಬಳ ಗ್ರಾಮದ ಬಳಿ ಹಿಂಬದಿಯ ಡಬಲ್ ಚಕ್ರದ (ಟೈಯರ್ ಗಳ) ಪೈಕಿ ಒಂದು ಟೈಯರ್( ಚಕ್ರ) ದಿಢೀರ್ ಬಿಚ್ಚಿ ರಸ್ತೆಯ ಪಕ್ಕದಲ್ಲಿ ಬಿತ್ತು.

ಬಸ್ ನ ಹಿಂದೆಯೇ ಹೋಗುತ್ತಿದ್ದ ಕಾರೊಂದರಲ್ಲಿನ ಜನ ತಮ್ಮ ಮೊಬೈಲ್ ನಲ್ಲಿ ಈ ವಿಡಿಯೋ ಸೆರೆ ಹಿಡಿದಿದ್ದು, ಅದೀಗ ವೈರಲ್ ಆಗಿದೆ.