ಆತಂಕದಲ್ಲಿ ಗ್ರಾಮಸ್ಥರು….
Advertisement
ವಿಜಯಸಾಕ್ಷಿ ಸುದ್ದಿ, ನರೇಗಲ್ಲ
ಮನೆಗೆ ಹಾಕಿದ್ದ ಚಿಲಕ ತಗೆದು ಒಳಹೊಕ್ಕ ಖದೀಮರು, ಅಡುಗೆ ಮನೆಯಲ್ಲಿದ್ದ ಟ್ರಝರಿಯಲ್ಲಿದ್ದ ಬಂಗಾರದ ಆಭರಣಗಳನ್ನು ದೋಚಿಕೊಂಡು ಹೋಗಿರುವ ಘಟನೆ ಹಾಡಹಗಲೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಮೀಪದ ಬೂದಿಹಾಳ ಗ್ರಾಮದ ರೈತ ಬಸನಗೌಡ ಪಾಟೀಲ ಅವರ ಮನೆಯ ಹಗಲು ಹೊತ್ತಿನಲ್ಲಿ ಕಳ್ಳತನವಾಗಿದೆ.
ಪಾಟೀಲ ದಂಪತಿ ಜಮೀನಿಗೆ ಹೋದಾಗ, ಮಕ್ಕಳು ಹಾಗೂ ತಾಯಿ ಮನೆಗೆ ಚಿಲಕ ಹಾಕಿ ಹೊರ ಹೋದಾಗ ಖದೀಮರು ಹೊಂಚು ಹಾಕಿ ಈ ದುಷ್ಕೃತ್ಯ ನಡೆಸಿದ್ದಾರೆ.
ದುಷ್ಕರ್ಮಿಗಳು, ಅಡುಗೆ ಮನೆಯ ಟ್ರಝರಿಯಲ್ಲಿ ಇಟ್ಟಿದ್ದ 50 ಸಾವಿರ ರೂ. ಮೌಲ್ಯದ ಎರಡೂವರೆ ತೊಲಿ ಬಂಗಾರದ ಚೈನು ಹಾಗೂ 8 ಸಾವಿರ ರೂ. ಮೌಲ್ಯದ 4 ಗ್ರಾಮ ತೂಕದ ಬೆಂಡವಾಲೆಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ 0060/2023-ipc 1860(U/s-454,380 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


