ಬೆಂಗಳೂರು;- ಡಿಕೆಶಿ ಸಂಕಷ್ಟಕ್ಕೆ ಸಿಲುಕಿದರೆ ಸಿದ್ದರಾಮಯ್ಯ ಒಳಗೊಳಗೇ ಖುಷಿ ಪಡ್ತಾರೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಒಳಜಗಳ ಹಾವು ಮುಂಗುಸಿಯಂತಾಗಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಪ್ರಕರಣದಲ್ಲಿ ಡಿಕೆಶಿ ನೂರಕ್ಕೆ ನೂರು ಜೈಲಿಗೆ ಹೋಗುತ್ತಾರೆ ಎಂದರು.
ಡಿಕೆಶಿ ವರ್ಚಸ್ಸನ್ನು ಕಡಿಮೆ ಮಾಡಲು ಅವರದೆ ಪಕ್ಷದ ವಿವಿಧ ಸಮಾಜದ ನಾಯಕರನ್ನು ಎತ್ತಿಕಟ್ಟುವ ಕಾರ್ಯ ನಡೆದಿದೆ. ಡಿಕೆಶಿ ಸಂಕಷ್ಟಕ್ಕೆ ಸಿಲುಕಿದರೆ ಸಿಎಂ ಸಿದ್ದರಾಮಯ್ಯ ಒಳಗೊಳಗೆ ಖುಷಿ ಪಡುತ್ತಾರೆ ಎಂದ ಅವರು, ಕಾಂಗ್ರೆಸ್ ಮುಳುಗುವ ಹಡಗು ಇದ್ದಂತೆ. ಲೋಕಸಭಾ ಚುನಾವಣಾ ನಂತರ ಏನಾಗುತ್ತೆ ಎಂಬುದನ್ನು ನೀವೇ ನೋಡ್ತಾ ಇರಿ ಎಂದು ಹೇಳಿದರು.
ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ. ಬಿಟ್ಟಿ ಭಾಗ್ಯಗಳನ್ನು ತಮ್ಮ ಮನೆಯಿಂದ ದುಡ್ಡು ತಂದು ಕೊಟ್ಟಿದ್ದಾರೆಯೇ? ಜನರ ದುಡ್ಡನ್ನು ಜನರಿಗೆ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಕಾಂಗ್ರೆಸ್ನವರಿಗೆ ಕಿವಿ, ಮೂಗು, ಚರ್ಮ ದಪ್ಪವಾಗಿದೆ ಎಂದು ಟೀಕಿಸಿದರು.
ಜನರಲ್ಲಿ ದುಡಿದು ತಿನ್ನುವ ಪ್ರವೃತ್ತಿ ಬೆಳೆಸಬೇಕು, ಮನೆಯಲ್ಲಿ ಕೂಡ್ರಿಸಿ ತಿನ್ನಿಸುವ ಪ್ರವೃತ್ತಿ ಸರಿಯಲ್ಲ, ವಿಶ್ವೇಶ್ವರಯ್ಯನಮಹ ಮಹಾನ್ ನಾಯಕರು ಶಿಕ್ಷಣ, ಆರೋಗ್ಯ, ನ್ಯಾಯ ಇವು ಜನರಿಗೆ ಉಚಿತವಾಗಿ ಸಿಗುವಂತಾಗಬೇಕು ಎಂದು ಹೇಳಿದ್ದಾರೆ. ಅವುಗಳನ್ನು ಅಳವಡಿಸಿಕೊಳ್ಳಬೇಕು ಎಂದರು.