ಬೆಂಗಳೂರು;- ಆಯುಧ ಪೂಜೆ-ವಿಜಯದಶಮಿ ಹಬ್ಬದ ಹಿನ್ನೆಲೆ ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಕೆ.ಆರ್.ಮಾರುಕಟ್ಟೆ, ಗಾಂಧಿ ಬಜಾರ್, ಮಲ್ಲೇಶ್ವರ, ಬನಶಂಕರಿ, ಯಶವಂತಪುರ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಜನಸಾಗರವೇ ನೆರೆದಿತ್ತು. ಹೂವು, ಹಣ್ಣುಮತ್ತು ತರಕಾರಿಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.
ಸೇವಂತಿಗೆ ಕೆಜಿಗೆ 150 ರೂ, ಉತ್ತಮ ಗುಲಾಬಿಗೆ 350 ರೂ, ಚೆಂಡು ಹೂ 60 ರಿಂದ 70 ರೂ, ಕನಕಾಂಬರ 1,200 ರೂ, ಮಲ್ಲಿಗೆ ಹೂವು 2,000 ರೂ.ಗೆ. ಸುಗಂಧರಾಜ 300 ರೂ, ಸಂಪಿಗೆ 250 ರೂಗೆ ಮಾರಾಟವಾಗುತ್ತಿದೆ.
ಮೂಸಂಬಿ ಹಣ್ಣು ಸುಮಾರು 60 ರೂ, ದಾಳಿಂಬೆ ಹಣ್ಣು 60 ರಿಂದ 80 ರೂ, ಬಾಳೆಹಣ್ಣು ಕೆಜಿಗೆ 70 ರೂ, ಸೇಬು 100 ರೂ, ಸಪೋಟ 70 ರಿಂದ 80 ರೂ, ಸೀತಾಫಲ ಸುಮಾರು 170 ರೂ, ದ್ರಾಕ್ಷಿ ಹಣ್ಣು 250 ರೂ. ಗೆ ವ್ಯಾಪಾರವಾಗುತ್ತಿದೆ.
ತರಕಾರಿಗಳ ದರಗಳ ಪೈಕಿ ಟೊಮೆಟೊ ಮಾತ್ರ ಕಡಿಮೆ ಬೆಲೆ 15 ರೂ. ಗೆ ಮಾರಾಟವಾಗುತ್ತಿದೆ. ಉಳಿದಂತೆ ಬದನೆ 50 ರೂ, ಕ್ಯಾರೆಟ್ 50 ರೂ, ಬೀನ್ಸ್ 100 ರೂ, ಬೀಟ್‌ರೂಟ್ 50 ರೂ, ಉತ್ತಮ ಗುಣಮಟ್ಟದ ಆಲೂಗಡ್ಡೆ 30 ರೂ. ಬೆಲೆ ಇದೆ.