ಹಣ ಕೊಟ್ರೂ ನಮಗೆ ಬೇರೆ ರಾಜ್ಯಗಳಲ್ಲಿ ವಿದ್ಯುತ್ ಸಿಗುತ್ತಿಲ್ಲ – ಸಚಿವ ಕೃಷ್ಣ ಭೈರೇಗೌಡ

0
Spread the love

ಯಾದಗಿರಿ;- ಸಚಿವ ಕೃಷ್ಣ ಭೈರೇಗೌಡರು ಯಾದಗಿರಿಯಲ್ಲಿ ಮಾತನಾಡಿ, ಹಣ ಕೊಡುತ್ತೇವೆ ಅಂದರೂ ಬೇರೆ ರಾಜ್ಯಗಳಿಂದ ವಿದ್ಯುತ್ ಸಿಗುತ್ತಿಲ್ಲ ಎಂದುಬೇಸರ ಹೊರ ಹಾಕಿದ್ದಾರೆ.

Advertisement

ಯಾದಗಿರಿಯಲ್ಲಿ ಮಾತನಾಡಿದ ಅವರು, ವಿದ್ಯುತ್ ಸಮಸ್ಯೆ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಬಹಳ ಗಂಭೀರವಾಗಿ ಪರಿಣಿಸಿದ್ದಾರೆ. ಎಲ್ಲಾ ವಿದ್ಯುತ್ ಕಂಪನಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ.

ಇಂಧನ ಸಚಿವರು ವಿದ್ಯುತ್ ಖರೀದಿಸಲು ಎಲ್ಲಾ ಕಡೆ ಪ್ರಯತ್ನ ಮಾಡ್ತಿದ್ದಾರೆ. ಯಾದಗಿರಿ ಉಸ್ತುವಾರಿ ಸಚಿವರು ಜೆಸ್ಕಾಂ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಇರುವುದರಲ್ಲೇ ವೇರಿಯೇಷನ್ ಮಾಡಿ ವಿದ್ಯುತ್ ನೀಡಲು ಪ್ರಯತ್ನಿಸುತ್ತಿದ್ದಾರೆ. ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಸಮಸ್ಯೆ ಕಾಡುತ್ತಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಹೀಗಾಗಿ ಜಲವಿದ್ಯುತ್ ಉತ್ಪಾದನೆಗೂ ಸಮಸ್ಯೆಯಾಗಿದೆ. ಈ ಮಧ್ಯೆ, ರಾಜ್ಯಗಳಲ್ಲಿ ವಿದ್ಯುತ್ ಬಳಕೆ ಮಾಡೋದು ಏಕಕಾಲಕ್ಕೆ ಜಾಸ್ತಿ ಆಗಿದೆ.

ಹೀಗಾಗಿ ಬೇರೆ ರಾಜ್ಯಗಳಿಂದಲೂ ಸಿಗುತ್ತಿಲ್ಲ. ಈ ಸಮಸ್ಯೆಗೆ ಸರ್ಕಾರ ಪರಿಹಾರ ಕಂಡುಕೊಳ್ಳಲಿದೆ. ಸಮಸ್ಯೆ ಇಲ್ಲ‌ ಅಂತ‌ ನಾನು ಹೇಳುತ್ತಿಲ್ಲ. ಸಮಸ್ಯೆ ಇದೆ. ಅದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here