ದಾವಣಗೆರೆ: ನಟ ಪುನೀತ್ ರಾಜ್ಕುಮಾರ್ 2ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ ಪುನೀತ್ ರಾಜ್ಕುಮಾರ್ ಸಮಾಧಿಗೆ ರಾಜ್ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ.
ಅದೇ ರೀತಿ ದಾವಣಗೆರೆಯಲ್ಲಿ ದಿ. ಪುನಿತ್ ರಾಜಕುಮಾರ್ ಅವರ 2ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಕುಂದವಾಡ ಕೆರೆ ಬಳಿಯ ಪಾರ್ಕ್ನಲ್ಲಿ ಸೂಪರ್ ಮಾಮ್ಸ್ ಆಫ್ ಗ್ರೂಪ್ ಹಾಗೂ ದಾವಣಗೆರೆಯ ಕುಂದುವಾಡ ಕೆರೆ ವಾಯುವಿಹಾರ ಬಳಗದಿಂದ ಪುಣ್ಯತಿಥಿ ಆಚರಣೆ ಮಾಡಿದ್ದಾರೆ.
ಅಪ್ಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬೊಂಬೆ ಹೇಳುತೈತೆ ಸಾಂಗ್ ಹಾಡುವ ಮೂಲಕ ಅಭಿಮಾನಿಗಳು ಅಪ್ಪು ಸ್ಮರಣೆ ಮಾಡಿದರು.



