ಮನೆ ಕಟ್ಟುವ ವಿಚಾರಕ್ಕೆ ಜಗಳ: ವ್ಯಕ್ತಿಯನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

0
Spread the love

ಆನೇಕಲ್: ನಿವೇಶನ ಜಾಗದ ವಿಚಾರಕ್ಕೆ ಪೊಲೀಸ್ ಠಾಣೆ ಹಿಂಭಾಗದ ಏರಿಯಾದಲ್ಲಿ ವ್ಯಕ್ತಿಯ ಬರ್ಬರ ಕೊಲೆ ಮಾಡಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಹೆಬ್ಬಗೋಡಿಯಲ್ಲಿ ನಡೆದಿದೆ.

Advertisement

ಹೆಬ್ಬಗೋಡಿಯ ರಮೇಶ್ ಎಂಬಾತನನ್ನು ಕೊಚ್ಚಿ ಕೊಲೆ ಮಾಡಲಾಗಿದ್ದು, ದುಷ್ಕರ್ಮಿಗಳು ವ್ಯಕ್ತಿಯನ್ನ ಕೊಚ್ಚಿ ಕೊಲೆ ಮಾಡುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಮೇಶ್ ಮನೆಯ ಎದುರು ಮನೆಯವರು ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಹೆಬ್ಬಗೋಡಿಯಲ್ಲಿ ಮನೆ ಕಟ್ಟುವ ವಿಚಾರಕ್ಕೆ ಮೃತ ರಮೇಶ್ ಹಾಗೂ ಕೊಲೆ ಆರೋಪಿಗಳ ನಡುವೆ ಗಲಾಟೆ ನಡೆಯುತ್ತಿತ್ತು. ಸರ್ಕಾರದಿಂದ ನೀಡಲಾಗಿದ್ದ ಜಾಗದಲ್ಲಿ ರಮೇಶ್ ನಿನ್ನೆ ಮನೆಗೆ ಅಡಿಪಾಯ ಹಾಕಿದ್ದರು.

ಇದೇ ಜಾಗವನ್ನು ಜಗದೀಶ್ ನನಗೆ ಸೇರಬೇಕು ಎಂದು ಆಗಾಗ ಗಲಾಟೆ ಮಾಡಿದ್ದ.ಹೆಬ್ಬಗೋಡಿ ನಗರಸಭೆಯಿಂದ ಜಾಗ ರಮೇಶ್ಗೆ ಸೇರಿದ್ದು ಎಂದು ದಾಖಲೆ ನೀಡಲಾಗಿತ್ತು. ಇದೇ ವಿಚಾರಕ್ಕೆ ರಾತ್ರಿ 10.30 ಸಮಯದಲ್ಲಿ ಮಾರಕಾಸ್ತ್ರಗಳ ಜೊತೆ ಬಂದು ನಿನ್ನೆ ರಾತ್ರಿ ರಮೇಶ್ನನ್ನು ಕೊಚ್ಚಿ ಕೊಲೆ ಮಾಡಲಾಗಿದೆ.

ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here