ಬೆಂಗಳೂರು: ಬೆಂಗಳೂರಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು ಜನರ ನಿದ್ದೆಗೆಡಿಸಿದೆ.
ಬೆಂಗಳೂರಿನ ಕೂಡ್ಲುಗೇಟ್ ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆ ಭಯದಲ್ಲೇ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಜನ ಓಡಾಡುತ್ತಿದ್ದಾರೆ. ಆದ್ರೆ ಕಳೆದ ಕೆಲದ ದಿನದಿಂದ ಚಿರತೆ ಆತಂಕ ಕಾಡ್ತಿದೆ.
ಹೌದು, ಬೆಂಗಳೂರು ದೊಡ್ಡದಾಗಿ ಬೆಳೆದಂತೆಲ್ಲಾ ಕಾಡು ನಾಶವಾಗುತ್ತಿದೆ. ಅದರಲ್ಲೂ ಈ ಮಹಾನಗರಿ ಬೆಂಗಳೂರು ಬೆಳೆಸಲು, ಕಳೆದ 20 ವರ್ಷದಲ್ಲಿ ಬೆಂಗಳೂರು ಹೊರವಲಯದ ಕಾಡುಗಳನ್ನ ನಾಶ ಮಾಡಲಾಗಿದೆ.
ಇದರ ಪರಿಣಾಮ ಕಾಡು ಪ್ರಾಣಿಗಳು ನಗರಕ್ಕೆ ಬಂದು ಕಾಟ ಕೊಡುತ್ತಿವೆ. ಕೆಲ ವರ್ಷದ ಹಿಂದೆ ಚಿರತೆಯೊಂದು ಸೀದಾ ಅಪಾರ್ಟ್ಮೆಂಟ್ ಒಳಗೆ ನುಗ್ಗಿತ್ತು.
ಅದಕ್ಕೂ ಮೊದಲು ರಾತ್ರಿ ಸಮಯಕ್ಕೆ ಸ್ಕೂಲ್ ಒಳಗೆ ಚಿರತೆ ಓಡಾಡುವ ದೃಶ್ಯ ಕಂಡು ಜನ ಶಾಕ್ ಆಗಿದ್ರು.
ಬೆಂಗಳೂರಲ್ಲಿ ಚಿರತೆ ಸ್ಕೂಲ್ಗೆ ನುಗ್ಗಿದ್ದ ವಿಡಿಯೋ ಜಗತ್ತಿನಾದ್ಯಂತ ವೈರಲ್ ಆಗಿತ್ತು. ಈಗ ಬೆಂಗಳೂರಿನ ನಡು ರಸ್ತೆಯಲ್ಲೇ ಈ ಚಿರತೆ ರಾಯ ಪ್ರತ್ಯಕ್ಷ್ಯನಾಗಿದ್ದಾನೆ