3 ಸಾವಿರ ಲೀಟರ್ ಹಾಲು ಸುರಿದು ಜೆಸ್ಕಾಂ ಕಚೇರಿಗೆ ಅಭಿಷೇಕ: ಆಕ್ರೋಶ ಹೊರಹಾಕಿದ ಹಾಲಿನ ಡೈರಿ ವ್ಯಾಪಾರಿ

0
Spread the love

ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿದ್ದ ಹಾಲಿನ ಡೇರಿಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದರಿಂದ ಸುಮಾರು ಮೂರು ಸಾವಿರ ಲೀಟರ ಹಾಲು ಹಾಳಾಗಿವೇ ಡೇರಿ ಮಾಲೀಕರು ನಗರದ ಜೆಸ್ಕಾಂ ಕಚೇರಿ ಎದುರು ತಡ ರಾತ್ರಿ ಹಾಲು ಚೆಲ್ಲಿ ಆಕ್ರೋಶ.

Advertisement

ನಗರದ ಲೋಕಲ್‌ ಫಾರ್ಮ್‌ ಡೇರಿ ಜೆಸ್ಕಾಂಗೆ ₹1.30 ಲಕ್ಷ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡಿತ್ತು.

ಸೋಮವಾರ ಬೆಳಿಗ್ಗೆ ಡೇರಿಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು. ಇದರಿಂದಾಗಿ ಮೂರು ಸಾವಿರ ಲೀಟರ್‌ ಹಾಲು ಕೆಟ್ಟು ಹೋಗಿದೆ. ತೀವ್ರ ನಷ್ಟವಾಗಿದ್ದಕ್ಕೆ ಟಂಟಂ ಮೂಲಕ 25 ಕ್ಯಾನ್‌ಗಳಲ್ಲಿ ಹಾಲು ತಂದು ಜೆಸ್ಕಾಂ ಕಚೇರಿ ಆವರಣದಲ್ಲಿ ಸುರಿದ ಜೆಸ್ಕಾಂ ಅಧಿಕಾರಿ ಈ ಅವಾಂತರಕ್ಕೆ ಕಾರಣ ಎಂದು ಆಕ್ರೋಶ.ನಮ್ಮ ಡೇರಿಯಿಂದ ₹1.30 ಲಕ್ಷ ವಿದ್ಯುತ್‌ ಬಿಲ್‌ ಕಟ್ಟಬೇಕಿತ್ತು.

₹45 ಸಾವಿರ ಕಟ್ಟಿದೆವೆ. ಶುಕ್ರವಾರ ₹50 ಸಾವಿರ ಮೊತ್ತದ ಚೆಕ್‌ ನೀಡಿದ್ದೇವೆ. ಚೆಕ್‌ ಕ್ಲೇಮ್‌ ಮಾಡಿಕೊಳ್ಳದೆ ಏಕಾಏಕಿ ಬಂದು ಬೆಳಿಗ್ಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ. ನೋಟಿಸ್‌ ಕೂಡ ನೀಡಿಲ್ಲ. ನಿತ್ಯ 25 ಹಳ್ಳಿಗಳ ರೈತರು ನಮಗೆ ಹಾಲು ಮಾರಾಟ ಮಾಡುತ್ತಾರೆ.

ಸಂಗ್ರಹವಾಗಿದ್ದ ಹಾಲು ಹಾಗೂ ಹಾಲಿನ ಇತರೆ ಉತ್ಪನ್ನಗಳು ಹಾಳಾಗಿದ್ದು, ಕನಿಷ್ಟ ₹4 ಲಕ್ಷ ನಷ್ಟವಾಗಿದೆ. ಮಂಗಳವಾರ ಪುನಃ ರೈತರು ಹಾಲು ತೆಗೆದುಕೊಂಡು ಬರುತ್ತಾರೆ. ಕರೆಂಟ್‌ ಇಲ್ಲದ ಕಾರಣ ಸಂಗ್ರಹಿಸಲು ಆಗುವುದಿಲ್ಲ.

ಇದಕ್ಕೆ ಯಾರು ಹೊಣೆ? ನಷ್ಟವನ್ನು ಜೆಸ್ಕಾಂ ಅಧಿಕಾರಿಗಳು ಭರಿಸಬೇಕು ಎಂದು ಡೇರಿ ಮಾಲೀಕರಾದ ಶಾಂತಬಾಯಿ ಹಾಗೂ ಅಜಯ್ ಬಿರಾದಾರ್ ಆಗ್ರಹಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here