ಬಳ್ಳಾರಿ: ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಮಳೆಯಾಗುತ್ತಿಲ್ಲ. ಕಳೆದ ಒಂದು ವಾರದ ಹಿಂದೆ ಬಿದ್ದ ಅಲ್ಪಸ್ವಲ್ಪ ಮಳೆಯನ್ನು ನಂಬಿ ಬಿತ್ತನೆ ಮಾಡಿದ್ದ ರೈತರು ಈಗ ಆಕಾಶ ನೋಡುವಂತಾಗಿದೆ. ಇನ್ನೇನು ಬಿತ್ತನೆಯಾಗಿ ಒಳ್ಳೆಯ ಬೆಳೆ ಬರಬಹುದೆಂದಿದ್ದ ರೈತರಿಗೆ ದಿಕ್ಕೇ ಈಗ ತೋಚದಂತಾಗಿದೆ. ಬಿತ್ತಿದ್ದ ಬೆಳೆ ಚಿಗುರೊಡೆಯದೇ ನೆಲದಲ್ಲೇ ಕಮರುತ್ತಿದೆ. ಮೆಣಸಿನಕಾಯಿ ಬೆಳೆ ಉಳಿಸಿಕೊಳ್ಳಲು ಗಣಿನಾಡಿನ ರೈತರು ಹರಸಾಹಸ ಪಡುತ್ತಿದ್ದು, ಟ್ಯಾಂಕರ್ ಮೂಲಕ ಮೆಣಸಿನಕಾಯಿ ಬೆಳೆಗೆ ನೀರು ಪೂರೈಸುತ್ತಿರುವ ರೈತರು,
ಬಳ್ಳಾರಿಯ ಸಿರುಗುಪ್ಪ ತಾಲೂಕಿನ ರಾರಾವಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ರೈತರು ಟ್ಯಾಂಕರ್ ಮೊರೆ ಹೋಗಿದ್ದಾರೆ. ವೇದಾವತಿ ನದಿ ನೀರು ಹಾಗೂ ಕಾಲುವೆಯ ಕೊನೆ ಭಾಗದಲ್ಲಿ ಮೆಣಸಿಕಾಯಿ, ಹತ್ತಿ ಬೆಳದಿರೋ ರೈತರು, ಈಗಾಗಲೇ ಶೇ 60ರಷ್ಟು ಬೆಳೆ ಮಳೆಯಿದ ಕೈಕೊಟ್ಟಿದೆ, ಉಳಿದ ಶೇ 40ರಷ್ಟು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದು, ಒಂದು ಎಕರೆಗೆ ಟ್ಯಾಂಕರ್ ಮೂಲಕ ನೀರು ಹರಿಸಲು 10ರಿಂದ 15ಸಾವಿರ ವೆಚ್ಚ ಮಾಡುತ್ತಿದ್ದಾರೆ.