ಬೆಂಗಳೂರು: ಕಳೆದ ಎರಡು ದಿನಗಳಲ್ಲಿ ಸಿಲಿಕಾನ್ ಸಿಟಿ ಜನರಲ್ಲಿ ಆತಂಕ ತಂದೊಡ್ಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸತತ ಕಾರ್ಯಾಚರಣೆ ನಂತರ ಸೆರೆಹಿಡಿದಿದ್ದಾರೆ. ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದ್ದು, ಲೆಪರ್ಡ್ಸ್ ಟಾಸ್ಕ್‌ಫೋರ್ಸ್ ವಾಹನಕ್ಕೆ ಶಿಫ್ಟ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಸೆರೆ ಹಿಡಿಯುವ ವೇಳೆ ವೈದ್ಯರ ಮೇಲೆಯೇ ದಾಳಿ ನಡೆಸಲು ಮುಂದಾಗಿದೆ. ಸದ್ಯ ಚಿರತೆಗೆ ಸಂಪೂರ್ಣ ಪ್ರಜ್ಞೆ ತಪ್ಪಿಲ್ಲ. ಟಾಸ್ಕ್ಫೋರ್ಸ್ ವಾಹನಕ್ಕೆ ಶಿಫ್ಟ್ ಮಾಡಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
Trending Now



