ವಿಜಯನಗರ: ದನಕರುಗಳ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಹೊಸಪೇಟೆ ತಾಲೂಕಿನ ರಾಯರಕೇರೆ ಪ್ರದೇಶದ ಹೊಲದಲ್ಲಿ ನಡೆದಿದೆ.
ಕಟಗಿ ವಸಂತಪ್ಪ ಎಂಬ ರೈತನ ಹಸು ಮೇಲೆ ಚಿರತೆ ದಾಳಿ ಮಾಡಿದ್ದು, ಕಳೆದ ಸ್ವಲ್ಪ ದಿನಗಳಿಂದ ಐದು ಕುರಿ, ನಾಲ್ಕು ನಾಯಿಗಳನ್ನು ಹೊತ್ತೊಯ್ದಿದೆ.
ಚಿರತೆ ಈಗ ದನಕರುಗಳ ಮೇಲೆ ದಾಳಿ ಮಾಡಿರುವುದರಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಬೆಳೆಯುತ್ತಿರುವ ರೈತರಿಗೆ ಚಿರತೆ ಕಾಟ ಹೆಚ್ಚಾಗಿದೆ.
ಹೊಸಪೇಟೆ ಟ್ರಾಫಿಕ್ ಪೊಲೀಸ್ ಠಾಣೆ, ನ್ಯಾಶನಲ್ ಕಾಲೇಜುಗಳ ಆಜು-ಬಾಜು ಚಿರತೆ ಓಡ್ಯಾಟ ಹೆಚ್ಚಾಗುತ್ತಿದೆ. ಇನ್ನೂ ಸ್ವಲ್ಪ ದಿನಗಳು ಬಿಟ್ರೆ, ಹೊಸಪೇಟೆ ನಗರ, ಹಳ್ಳಿಗಳ ಭಾಗದಲ್ಲಿ ಚಿರತೆ ಎಂಟ್ರಿಯಾಗುತ್ತದೆ ಅನ್ನೋದು ರೈತರ ಆತಂಕವಾಗಿದ್ದು, ಕೂಡಲೇ ಚಿರತೆ ಸೆರೆ ಹಿಡಯಬೇಕು ಎಂದು ರೈತರು ಒತ್ತಾಯ ಮಾಡಿದ್ದಾರೆ.



