ರಾಮನಗರ : ಬಿಡದಿ ಭಾಗಕ್ಕೆ ಮೆಟ್ರೋ ತರಲು ಪ್ರಯತ್ನ ಮಾಡುತ್ತೇನೆ. ಬಿಡದಿ ಭಾಗದಲ್ಲಿ ಲಕ್ಷಾಂತರ ಜನರು ಕೆಲಸ ಮಾಡುತ್ತಿದ್ದಾರೆ. ಹೊಸೂರುವರೆಗೂ ಮೆಟ್ರೋ ವಿಸ್ತರಣೆಗೆ ಪ್ರಯತ್ನ ಮಾಡುತ್ತಿದ್ದೇವೆ. ಅದೇ ರೀತಿ ಬಿಡದಿವರೆಗೂ ಮೆಟ್ರೋ ವಿಸ್ತರಿಸಲು ಯೋಚಿಸಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ಬಿಡದಿಯಲ್ಲಿ ನಡೆದ ಟೊಯೋಟಾ ತರಬೇತಿ ಕೇಂದ್ರ ವಿಸ್ತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
Advertisement
ನಾನು ಬರೀ ಉದ್ಘಾಟನೆ ಮಾಡಲಿಕ್ಕೆ ಬಂದಿಲ್ಲ. ಬಿಡದಿಗೆ ಗಿಫ್ಟ್ ಕೊಡುವ ಆಸೆಯಿಂದ ಈ ಭಾಗಕ್ಕೂ ಮೆಟ್ರೋ ತರಲು ಪ್ರಯತ್ನ ಮಾಡುತ್ತೇನೆ. ಬಾಲಕೃಷ್ಣ ಹಾಗೂ ಸುರೇಶ್ರವರು ಬೆನ್ನು ಬಿದ್ದಿದ್ದಾರೆ. ಲಕ್ಷಾಂತರ ಮಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊಸೂರುವರೆಗೂ ನಾವು ಪ್ರಯತ್ನ ಮಾಡುತ್ತಿದ್ದೇವೆ. ಅದೇ ತರ ಬಿಡದಿವರೆಗೂ ಮೆಟ್ರೋ ತರಲು ಯೋಚಿಸಿದ್ದೇನೆ ಎಂದು ಹೇಳಿದರು.